ADVERTISEMENT

ನಿರ್ಬಂಧದ ನಡುವೆಯೂ ನಡೆದ ಜಾತ್ರೆ!

ಆದೇಶ ಉಲ್ಲಂಘನೆಯ ಆರೋಪ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 14:20 IST
Last Updated 14 ಮಾರ್ಚ್ 2020, 14:20 IST

ಮಡಿಕೇರಿ: ಕೊರೊನಾ ಸೋಂಕು ತಡೆಯಲು ಜಾತ್ರೆ ಹಾಗೂ ಉತ್ಸವ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದರೂ ಕೊಡಗಿನಲ್ಲಿ ಶನಿವಾರ ಜಾತ್ರೆಯೊಂದು ನಡೆದಿದೆ. ಸರ್ಕಾರದ ಆದೇಶಕ್ಕೂ ಬೆಲೆ ನೀಡಿಲ್ಲ.

ಗಾಳಿ ವೇಗದಲ್ಲಿ ಕೊರೊನಾ ಹಬ್ಬುತ್ತಿದ್ದು ಅದನ್ನು ತಡೆಯುವುದಕ್ಕೆ ರಾಜ್ಯ ಸರ್ಕಾರ ಜಾತ್ರೆಗೂ ನಿರ್ಬಂಧ ಹೇರಿದೆ. ಆದರೆ, ತಾಲ್ಲೂಕಿನ ಮಲೆತಿರಿಕೆ ಬೆಟ್ಟದಲ್ಲಿ ನೂರಾರು ಮಂದಿ ಒಂದೆಡೆ ಸೇರಿ ಜಾತ್ರೆ ನಡೆಸಿದ್ದಾರೆ. ಬೆಟ್ಟದ ಮೇಲಿರುವ ಶಿವನ ದೇವಾಲಯದಲ್ಲಿ ನಡೆಯುವ ಜಾತ್ರೆಗೆ ಸುತ್ತಮುತ್ತಲ ಹಳ್ಳಿಗಳ ಜನರೂ ಸೇರಿದ್ದರು.

'ಪ್ರತಿವರ್ಷ ಮಾರ್ಚ್ 14ರಂದೇ ಈ ಜಾತ್ರೆ ನಡೆಸುತ್ತೇವೆ. ಅದೇ ರೀತಿ ಬಾರಿಯೂ ಜಾತ್ರೆ ನಡೆದಿದೆ. ಇಲ್ಲಿಗೆ ಯಾರೂ ಹೊರ ರಾಜ್ಯ ಅಥವಾ ವಿದೇಶದಿಂದ ಬಂದಿಲ್ಲ. ಸ್ಥಳೀಯರೇ ಜಾತ್ರೆ ನಡೆಸಿದ್ದೇವೆ. ನಮಗೆ ಕೊರೊನಾ ಆತಂಕವೂ ಇಲ್ಲ’ ಎಂದು ಗ್ರಾಮಸ್ಥರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.