ADVERTISEMENT

ಬಾಗಿನ ಅರ್ಪಿಸಲು ಹೋದವರಿಗೆ ಕಂಡಿದ್ದು ನೆರೆ ಸಂತ್ರಸ್ತನ ಶವ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:46 IST
Last Updated 8 ಅಕ್ಟೋಬರ್ 2019, 19:46 IST

ಹಾವೇರಿ: ಆಗಸ್ಟ್ ತಿಂಗಳ ಮಳೆಗೆ ಮನೆ ಕಳೆದುಕೊಂಡು ವಾಲ್ಮೀಕಿ ಭವನದಲ್ಲಿ ಆಶ್ರಯ ಪಡೆದಿದ್ದ ಕಾಟೇನಹಳ್ಳಿಯ ರೈತ ಹನುಮಂತಪ್ಪ ಫಕ್ಕೀರಪ್ಪ ಪವಾಡಿ (50) ಅವರು ಗ್ರಾಮದ ನೀರಿನ ಹೊಂಡದಲ್ಲಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ.

ಹೊಂಡ ತುಂಬಿ ಕೋಡಿ ಬಿದ್ದಿದ್ದರಿಂದ ಗ್ರಾಮಸ್ಥರು ಶಾಸಕ ನೆಹರು ಓಲೇಕಾರ ನೇತೃತ್ವದಲ್ಲಿ ಗುರುವಾರ ಬೆಳಿಗ್ಗೆ ಬಾಗಿನ ಅರ್ಪಿಸಲು ಸಿದ್ಧತೆ ನಡೆಸುತ್ತಿದ್ದರು. ಆಗ ಶವ ಕಂಡುಬಂದಿದೆ.

‘ಅಪ್ಪ ಕೃಷಿಗಾಗಿ ಬ್ಯಾಂಕ್‌ನಲ್ಲಿ ಹಾಗೂ ಪರಿಚಿತರ ಬಳಿ ₹ 3 ಲಕ್ಷ ಸಾಲ ಮಾಡಿದ್ದರು. ಎರಡು ತಿಂಗಳ ಹಿಂದೆ ಸುರಿದ ಮಳೆಗೆ, ಮನೆ ಜತೆಗೆ ಎರಡೂವರೆ ಎಕರೆ ಜಮೀನು ನಾಶವಾಯಿತು. ಸರ್ಕಾರದಿಂದ ಪರಿಹಾರವೂ ಬರಲಿಲ್ಲ. ಇದೇ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮೃತರ ಮಗಳು ರೇಣುಕಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.