ADVERTISEMENT

ಮಧ್ಯಮಾವಧಿ ಸಾಲ ಪಾವತಿಸಿದ ಶೇ 40ರಷ್ಟು ರೈತರು

ಡಿಸಿಸಿ ಬ್ಯಾಂಕಿನಿಂದ ರೈತರಿಗೆ ₹ 81 ಕೋಟಿ ಸಾಲ ನೀಡಿಕೆ, ಜೂನ್‌ ತಿಂಗಳಲ್ಲೇ ₹ 22 ಕೋಟಿ ವಸೂಲಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 15:52 IST
Last Updated 5 ಜುಲೈ 2020, 15:52 IST

ಕಲಬುರ್ಗಿ: ಕಲಬುರ್ಗಿ– ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಲ್ಲಿ ಮಧ್ಯಮಾವಧಿ ಸಾಲದ ಪಡೆದ ಶೇಕಡ 40ರಷ್ಟು ರೈತರು ಮರುಪಾವತಿ ಮಾಡಿದ್ದಾರೆ. ಸಾಲದ ಮೊತ್ತ ಪಾವತಿಸಿದರೆ ಬಡ್ಡಿ ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದ ಕಾರಣ, ರೈತರು ಸಾಲ ಭರ್ತಿ ಮಾಡಿದ್ದಾರೆ.

‘ಎರಡೂ ಜಿಲ್ಲೆಗಳ 2,099 ರೈತರು ₹ 81 ಕೋಟಿಗೂ ಹೆಚ್ಚು ಮಧ್ಯಮ ಅವಧಿಯ ಸಾಲ ಪಡೆದಿದ್ದರು. ಜೂನ್‌ 31ರವರೆಗೆ 850ಕ್ಕೂ ಹೆಚ್ಚು ರೈತರು ಸಾಲದ ಪೂರ್ಣ ಕಂತು ತುಂಬಿದ್ದಾರೆ. ಜೂನ್‌ ತಿಂಗಳಲ್ಲಿಯೇ ₹ 22 ಕೋಟಿಯಷ್ಟು ಮರುಪಾವತಿಯಾಗಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಸವರಾಜ ವಾಲಿ ತಿಳಿಸಿದ್ದಾರೆ.

‘ನೀರಾವರಿ ಇರುವ ರೈತರು ಹೊಲಗಳ ಪೈಪ್‌ಲೈನ್, ಬ್ಯಾಂಕ್‍ನಿಂದ ಟ್ರ್ಯಾಕ್ಟರ್ ಹಾಗೂ ಇತರ ಕೃಷಿ ಚಟುವಟಿಕೆಗಳಿಗಾಗಿ ಮಧ್ಯಮ ಅವಧಿ ಸಾಲ ಪಡೆದುಕೊಂಡಿದ್ದಾರೆ. ಬ್ಯಾಂಕ್‌ ಅಧಿಕಾರಿಗಳು ಮತ್ತು ಪಿಕೆಪಿಎಸ್‍ ಕಾರ್ಯದರ್ಶಿಗಳು ರೈತರಿಗೆ ಮನವರಿಕೆ ಮಾಡಿ, ಬಡ್ಡಿ ಮನ್ನಾದ ಲಾಭ ಪಡೆದುಕೊಳ್ಳಲು ಪ್ರೇರೇಪಿಸಿದ್ದಾರೆ. ಹೀಗಾಗಿ, ಒಂದೇ ತಿಂಗಳಲ್ಲಿ ದೊಡ್ಡ ಕೊತ್ತದ ಸಾಲ ವಸೂಲಾಗಿದೆ’ ಎಂದು ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ ಮಲಕೂಡ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.