ADVERTISEMENT

ಖಾಸಗಿ ಶಾಲೆಗಳ ಶುಲ್ಕದ ವಿವರ ಪ್ರಕಟಿಸುವುದು ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2023, 6:59 IST
Last Updated 18 ಏಪ್ರಿಲ್ 2023, 6:59 IST
   

ಬೆಂಗಳೂರು: ವಿದ್ಯಾರ್ಥಿಗಳಿಂದ ಪಡೆಯುವ ಶುಲ್ಕದ ವಿವರಗಳನ್ನು ಕಡ್ಡಾಯವಾಗಿ ಪ್ರಕಟಿಸುವುದೂ ಸೇರಿದಂತೆ ಖಾಸಗಿ ಶಾಲೆಗಳ ಪ್ರವೇಶ ಪ್ರಕ್ರಿಯೆ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುತ್ತೋಲೆ ಹೊರಡಿಸಿದೆ.

ಏಪ್ರಿಲ್‌ನಿಂದ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕು. ಮಗು ಹಿಂದೆ ಓದುತ್ತಿದ್ದ ಶಾಲೆ ತೊರೆದು ಬೇರೆ ಶಾಲೆಗೆ ಪ್ರವೇಶ ಪಡೆದರೆ ತಕ್ಷಣವೇ ವರ್ಗಾವಣೆ ಪತ್ರ ನೀಡಬೇಕು. ಸಿಬಿಎಸ್‌ಸಿ, ಐಸಿಎಸ್‌ಸಿ ಪಠ್ಯ ಕ್ರಮದ ಶಾಲೆಗಳೂ ಈ ನಿಯಮ ಪಾಲಿಸಬೇಕು. ಡೊನೇಷನ್‌ ಪಡೆಯಬಾರದು, ಮಗುವಿನ ಪ್ರವೇಶಕ್ಕೆ ಪೋಷಕರಿಗೆ ಪ್ರವೇಶ ಪರೀಕ್ಷೆ ನಡೆಸಬಾರದು. ನಿಯಮ ಉಲ್ಲಂಘಿಸಿದ ಶಾಲೆಗಳಿಗೆ ₹ 1 ಲಕ್ಷ ದಂಡ, ಉಲ್ಲಂಘನೆ ಪುನರಾವರ್ತಿತವಾದರೆ ದಿನಕ್ಕೆ ₹ 10 ಸಾವಿರ ದಂಡ ವಸೂಲಿ ಮಾಡಲಾಗುವುದು ಎಂದು ಆಯುಕ್ತ ಆರ್‌.ವಿಶಾಲ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT