ADVERTISEMENT

‘ಲೋಕೋಪಯೋಗಿ ಇಲಾಖೆಗೆ ₹15 ಸಾವಿರ ಕೋಟಿ ಬೇಡಿಕೆ’

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 10:44 IST
Last Updated 28 ಫೆಬ್ರುವರಿ 2020, 10:44 IST
ಗೋವಿಂದ ಎಂ. ಕಾರಜೋಳ
ಗೋವಿಂದ ಎಂ. ಕಾರಜೋಳ   

ಕಲಬುರ್ಗಿ: ಲೋಕೋಪಯೋಗಿ ಇಲಾಖೆಗೆ ಈ ಬಜೆಟ್‌ನಲ್ಲಿ ₹15 ಸಾವಿರ ಕೋಟಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೋರಲಾಗಿದೆ ಎಂದು ಲೋಕೋಪಯೋಗಿ ಖಾತೆಯನ್ನೂ ಹೊಂದಿರುವಉಪಮುಖ್ಯಮಂತ್ರಿ ಗೋವಿಂದ ‌ಎಂ.ಕಾರಜೋಳ ತಿಳಿಸಿದರು.

‘ಕಳೆದ ಬಾರಿ ಇಲಾಖೆಗೆ ₹9500 ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು.ಈ ಬಾರಿ ನೆರೆಹಾವಳಿಯಿಂದಾಗಿ ಹಾಳಾಗಿರುವ ರಸ್ತೆ, ಸೇತುವೆಗಳ ಶಾಶ್ವತ ರಿಪೇರಿಗೆ ₹7,021 ಕೋಟಿ ಬೇಕಿದೆ. ಹೀಗಾಗಿ ಹೆಚ್ಚಿನ ಅನುದಾನ ಕೇಳಿದ್ದೇವೆ’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹದಾಯಿ: ‘ಮಹದಾಯಿ ಜಲವಿವಾದ ಐತೀರ್ಪಿನ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಇದರಿಂದಾಗಿ ನಾವು ಕಾಮಗಾರಿ ಕೈಗೊಳ್ಳಲು ಇದ್ದ ಅಡ್ಡಿ ನಿವಾರಣೆಯಾಗಿದ್ದು, ನಮ್ಮ ಪಾಲಿನ ಹನಿ ನೀರೂ ವ್ಯರ್ಥವಾಗದಂತೆ ನೋಡಿಕೊಳ್ಳುತ್ತೇವೆ. ಕ್ರಿಯಾಯೋಜನೆ ರೂಪಿಸಿ ಕಾಮಗಾರಿ ಅನುಷ್ಠಾನಗೊಳಿಸುತ್ತೇವೆ’ ಎಂದು ಕಾರಜೋಳ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.