ADVERTISEMENT

ಸಾಲದ ಹೊರೆ: ಉಡುಪಿಯಲ್ಲಿ ಮೀನುಗಾರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 11:52 IST
Last Updated 10 ಜೂನ್ 2020, 11:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉಡುಪಿ: ಮೀನುಗಾರಿಕೆಯಲ್ಲಿ ನಷ್ಟ ಹಾಗೂ ಸಾಲದಿಂದ ಬೇಸತ್ತು ಮನನೊಂದ ಯುವಕ ಮಂಗಳವಾರ ರಾತ್ರಿ ಬೋಟ್‌ನೊಳಗೆ ‌ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಡಾನಿಡಿಯೂರು ಗ್ರಾಮದ ಪಾವಂಜೆಗುಡ್ಡೆಯ ಭಾಗ್ಯರಾಜ್‌ (27) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮನೆ ನಿರ್ಮಾಣ ಹಾಗೂ ಬೋಟ್‌ ಖರೀದಿಗೆ ಭಾಗ್ಯರಾಜ್‌ ಹಲವೆಡೆ ಸಾಲ ಮಾಡಿದ್ದರು. ಲಾಕ್‌ಡೌನ್ ಅವಧಿಯಲ್ಲಿ ಮೀನುಗಾರಿಕೆ ನಡೆಯದ ಪರಿಣಾಮ ಸಾಲದ ಹೊರೆ ಹೆಗಲೇರಿತ್ತು.

ಇದೇ ಕೊರಗಿನಲ್ಲಿದ್ದ ಅವರು ಮಂಗಳವಾರ ರಾತ್ರಿ ಸ್ನೇಹಿತನ ಮನೆಗೆ ಹೋಗಿ ಬರುವುದಾಗಿ ಕುಟುಂಬದವರಿಗೆ ತಿಳಿಸಿ, ಮಲ್ಪೆಯ ಬಾಬುತೋಟದ ಬಂದರಿನಲ್ಲಿ ಲಂಗರು ಹಾಕಿದ್ದ ಬೋಟ್‌ನಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಭಾಗ್ಯರಾಜ್‌ ಕಬಡ್ಡಿ ಆಟಗಾರನಾಗಿದ್ದರು.ಮಲ್ಪೆ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.