ADVERTISEMENT

ಧಾರ್ಮಿಕ ದ್ವೇಷ ಕುರಿತು ತನಿಖೆಗೆ ಆಗ್ರಹಿಸಿ ಸಿ.ಎಂಗೆ ಮೊಯಿಲಿ ಪತ್ರ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 20:40 IST
Last Updated 12 ಫೆಬ್ರುವರಿ 2022, 20:40 IST
ವೀರಪ್ಪ ಮೊಯಿಲಿ
ವೀರಪ್ಪ ಮೊಯಿಲಿ   

ಬೆಂಗಳೂರು: ‘ಉಡುಪಿಯ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಗೊಂಡು ಇಡೀ ರಾಜ್ಯದಲ್ಲಿ ಧಾರ್ಮಿಕ ದ್ವೇಷದ ಜ್ವಾಲೆ ಹರಡಲು ಕಾರಣವಾದ ಘಟನೆಯ ಬಗ್ಗೆ ತಕ್ಷಣ ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾಂಗ್ರೆಸ್‌ ಮುಖಂಡ ಎಂ. ವೀರಪ್ಪ ಮೊಯಿಲಿ ಪತ್ರ ಬರೆದಿದ್ದಾರೆ.

‘ಈ ಬೆಳವಣಿಗೆ ಯಾಕಾಯಿತು? ಅದರ ಮೂಲವೇನು? ಯಾವ ವ್ಯಕ್ತಿ, ಸಂಘ ಇದರಲ್ಲಿ ಭಾಗಿ ಆಗಿವೆ ಎನ್ನು ವುದನ್ನು ತನಿಖೆ ಮಾಡಬೇಕು. ಬಳಿಕ ತನಿಖಾ ವರದಿಯ ಬಗ್ಗೆ ಶಿಕ್ಷಣ ತಜ್ಞರು, ಚಿಂತಕರ ಸಭೆ ನಡೆಸಿ, ಇನ್ನು ಮುಂದೆ ಶೈಕ್ಷಣಿಕ ಕ್ಷೇತ್ರದಲ್ಲಿ ಇಂಥ ಕ್ಷೋಭೆಯ ಪ್ರಸಂಗ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎಂದೂ ಒತ್ತಾಯಿಸಿದ್ದಾರೆ.

‘ಈ ಕ್ಷೋಭೆಯ ಬೆಂಕಿ ಆರಿಸಲು ಶೈಕ್ಷಣಿಕ, ಸಾಂಸ್ಕೃತಿಕ ಚಿಂತಕರ ಸಭೆ ಸಭೆ ಕರೆಯಬೇಕು. ವಿರೋಧ ಪಕ್ಷದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಾಮರಸ್ಯದ ವಾತಾವರಣ ಪುನರು ತ್ಥಾನ ಮಾಡಲು ಕ್ರಮ ತೆಗೆದುಕೊಳ್ಳ
ಬೇಕು’ ಎಂದೂ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

ADVERTISEMENT

ಪರಿಸ್ಥಿತಿ ದುರ್ಬಳಕೆ ಬೇಡ: ಕಾಗೇರಿ

‘ಹಿಜಾಬ್‌ ವಿಚಾರದಲ್ಲಿ ವಾದ– ವಿವಾದ ನಡೆಯುತ್ತಿದೆ. ಚರ್ಚೆ ಅಂತರರಾಷ್ಟ್ರೀಯ ಮಟ್ಟದವರೆಗೂ ತಲುಪಿದೆ. ಈ ವಿಷಯ ಈಗ ನ್ಯಾಯಾಲಯದ ಮುಂದಿದ್ದು, ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ. ನ್ಯಾಯಾಂಗಕ್ಕೆ ಗೌರವ ನೀಡಿ ಎಲ್ಲರೂ ತಾಳ್ಮೆಯಿಂದ ಇರಬೇಕು. ಪರಿಸ್ಥಿತಿಯ ದುರ್ಲಾಭ ಪಡೆಯಲು ಯತ್ನಿಸಬಾರದು’ ಎಂದು ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.