ADVERTISEMENT

ನಾಸಾ ಮಾಜಿ ವಿಜ್ಞಾನಿ, ಇತಿಹಾಸಕಾರ ಡಾ.ನವರತ್ನ ಶ್ರೀನಿವಾಸ ರಾಜಾರಾಮ್‌ ನಿಧನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 7:14 IST
Last Updated 11 ಡಿಸೆಂಬರ್ 2019, 7:14 IST
   

ಬೆಂಗಳೂರು: ಅಮೆರಿಕದ ನಾಸಾ ಮಾಜಿ ವಿಜ್ಞಾನಿ, ವಿದ್ವಾಂಸ, ಇತಿಹಾಸಕಾರ ಡಾ.ನವರತ್ನ ಶ್ರೀನಿವಾಸ ರಾಜಾರಾಮ್‌ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ನವರತ್ನ ರಾಜಾರಾಮ್‌ ಅವರು ಮೈಸೂರಿನಲ್ಲಿ1943ರಲ್ಲಿ ಜನಿಸಿದರು. ಅಮೆರಿಕದಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಗಣಿತ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದರು. ಅಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ನಾಸಾದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ಬಳಿಕ ಅವರು ಭಾರತದ ಪ್ರಾಚೀನ ಇತಿಹಾಸ ಕಡೆ ಗಮನಹರಿಸಿ ಸಂಶೋಧನೆಗಳನ್ನು ನಡೆಸಿದ್ದರು.

ಇತಿಹಾಸದ ಕುರಿತಂತೆ ಇಂಗ್ಲಿಷ್‌ನಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.ಇತಿಹಾಸ, ಸಂಸ್ಕೃತಿ ಮತ್ತು ರಾಷ್ಟ್ರೀಯತೆ,ರಾಷ್ಟ್ರಚಿಂತನ ತರಂಗಗಳು,ಸೆಕ್ಯುಲರಿಸಂ ಮತ್ತು ಮೂಲಭೂತವಾದ ಕನ್ನಡದಲ್ಲಿ ಲಭ್ಯ ಇರುವ ರಾಜಾರಾಮ್‌ ಅವರ ಪ್ರಮುಖಪುಸ್ತಕಗಳು.

ADVERTISEMENT

ಕನ್ನಡದ ಹಿರಿಯ ಸಾಹಿತಿನವರತ್ನ ರಾಮರಾಯರ ಮೊಮ್ಮಗರಾಗಿದ್ದ ನವರತ್ನ ರಾಜಾರಾಮ್‌ಸಾಹಿತ್ಯ, ಇತಿಹಾಸ, ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.