ADVERTISEMENT

ವಿಶ್ವ ವಿಜ್ಞಾನಿಗಳ ಪಟ್ಟಿಯಲ್ಲಿ ಪ್ರೊ. ಕೆ.ಎಸ್‌. ರಂಗಪ್ಪ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 17:38 IST
Last Updated 2 ನವೆಂಬರ್ 2020, 17:38 IST
ಪ್ರೊ.ಕೆ.ಎಸ್‌.ರಂಗಪ್ಪ
ಪ್ರೊ.ಕೆ.ಎಸ್‌.ರಂಗಪ್ಪ   

ಮೈಸೂರು: ಅಮೆರಿಕದ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯ ಪ್ರಕಟಿಸಿರುವ ವಿಶ್ವದ ಅತ್ಯುನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಇರುವ ವಿಜ್ಞಾನಿಗಳ ಪೈಕಿ ಭಾರತದ ಅಗ್ರ ವಿಜ್ಞಾನಿಗಳ ಪಾಲು ಶೇ2ರಷ್ಟು. ಪ್ರೊ.ರಂಗಪ್ಪ 2,181ನೇ ಸ್ಥಾನದಲ್ಲಿದ್ದಾರೆ. ಸಾವಯವ ರಾಸಾಯನ ವಿಜ್ಞಾನ ಕ್ಷೇತ್ರದಲ್ಲಿನ ಅವರ ಸಾಧನೆ ಗುರುತಿಸಲಾಗಿದೆ. 500 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದು, 11 ವಿವಿಧ ಸಂಶೋಧನಾ ಪೇಟೆಂಟ್‌ ಹೊಂದಿದ್ದಾರೆ.

‘40 ವರ್ಷಗಳಲ್ಲಿ ಕೈಗೊಂಡ ಸಂಶೋಧನೆಗೆ ಸಿಕ್ಕ ಫಲವಿದು. ನನ್ನ ಪಾಲಿಗೆ ಇದೊಂದು ವಿಶ್ವದ ಅತ್ಯುತ್ತಮ ಪ್ರಶಸ್ತಿ ಲಭಿಸಿದ ಅನುಭವ. ಮೈಸೂರು ವಿಶ್ವವಿದ್ಯಾಲಯಕ್ಕೆ ಸಿಕ್ಕ ವಿಶೇಷ ಮನ್ನಣೆ’ ಎಂದು ಪ್ರೊ.ರಂಗಪ್ಪ ಪ್ರತಿಕ್ರಿಯಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.