ಬೆಂಗಳೂರು: ಬ್ಯಾಂಕ್ ಖಾತೆಗಳನ್ನು ಗುರಿಯಾಗಿಸಿ ವಂಚನೆ ಮಾಡುತ್ತಿದ್ದ ಕೇರಳದ ಇಬ್ಬರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.
ರಾಘವ್ ಲಾಲ್ ಹಾಗೂ ಪಿಳ್ಳೈ ಬಂಧಿತರು. ₹ 5 ಕೋಟಿಗೂ ಅಧಿಕ ಸಾಲ ಪಡೆದು ಸಾಲ ತೀರಿಸದೇ ಎನ್‌ಪಿಎ ಪಟ್ಟಿಯಲ್ಲಿದ್ದವರನ್ನು ಪತ್ತೆ ಮಾಡುತ್ತಿದ್ದ ಆರೋಪಿಗಳು ಬ್ಯಾಂಕ್ ಗ್ರಾಹಕರಿಗೆ ಕರೆ ಮಾಡಿ, ‘ಕಡಿಮೆ ಹಣಕ್ಕೆ ಬ್ಯಾಂಕ್ ವ್ಯವಹಾರ ಪೂರ್ಣಗೊಳಿಸುತ್ತೇವೆ’ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದರು. ಸತೀಶ್ ಎಂಬುವರಿಗೆ ಆರೋಪಿಗಳು ₹ 82 ಲಕ್ಷ ವಂಚಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.