ADVERTISEMENT

ರೇಷ್ಮೆ ಗೂಡಿಗೆ ರಕ್ಷಣಾತ್ಮಕ ದರ ನೀಡಲು ಹಣ ಮಂಜೂರು: ಸಚಿವ ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 6:31 IST
Last Updated 11 ಜುಲೈ 2020, 6:31 IST
ನಾರಾಯಣ ಗೌಡ
ನಾರಾಯಣ ಗೌಡ   

ಬೆಂಗಳೂರು: ರೇಷ್ಮೆ ಬೆಳೆಗಾರರ ಹಿತ ರಕ್ಷಣೆ ಮಾಡುವ ಸಲುವಾಗಿ ರೇಷ್ಮೆ ಗೂಡಿಗೆ ರಕ್ಷಣಾತ್ಮಕ ದರ ನೀಡಲು ತೋಟಗಾರಿಕಾ ಸಚಿವ ನಾರಾಯಣಗೌಡ ಅವರು ₹ 10 ಕೋಟಿ ಹಣ ಮಂಜೂರು ಮಾಡಿದ್ದಾರೆ.

ಸಚಿವರು ಈ ಮೊದಲು ರೇಷ್ಮೆ ರೀಲರ್ಸ್ ಗಳಿಗೆ ಅಡಮಾನ ಸಾಲದ ಮಿತಿಯನ್ನು ₹ 2 ಲಕ್ಷಕ್ಕೆ ಏರಿಸಿದ್ದಲ್ಲದೆ, ₹ 20 ಕೋಟಿ. ಹಣವನ್ನೂ ನೀಡಿದ್ದರು. ಈಗ ರೇಷ್ಮೆ ಬೆಳೆಗಾರರ ನೆರವಿಗೆ ಮತ್ತೊಮ್ಮೆ ಧಾವಿಸಿದ್ದಾರೆ.

ಕೋವಿಡ್ -19 ಹಿನ್ನೆಲೆಯಲ್ಲಿ ರೇಷ್ಮೆ ಗೂಡಿನ ದರ ಕುಸಿದಿತ್ತು. ಸಂಕಷ್ಟಕ್ಕೆ ಸಿಲುಕಿದ ರೈತರು ರೇಷ್ಮೆ ಸಚಿವ ನಾರಾಯಣಗೌಡ ಅವರಲ್ಲಿ ಮನವಿ ಮಾಡಿದ್ದರು. ತಕ್ಷಣವೇ ಅಧಿಕಾರಿಗಳ ಜೊತೆ ಸಭೆ ನಡೆಸಿ, ರೈತರಿಗೆ ರಕ್ಷಣಾತ್ಮಕ ದರ ನೀಡಲು ಸಚಿವರು ಸೂಚಿಸಿದ್ದಾರೆ.

ADVERTISEMENT

ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಗುಣಮಟ್ಟ ಆಧರಿಸಿ ದರ ನಿಗದಿ ಮಾಡಲಾಗುತ್ತದೆ. ಗುಣಮಟ್ಟಕ್ಕೆ ನಿಗದಿಪಡಿಸಿರುವ ದರ ಸಿಗದೆ ಇದ್ದಲ್ಲಿ, ಸರ್ಕಾರ ರಕ್ಷಣಾತ್ಮಕ ದರ ನೀಡಲಿದೆ. ಪ್ರತಿ ಕೆ.ಜಿ. ರೇಷ್ಮೆ ಗೂಡಿಗೆ ₹50 ಮೀರದಂತೆ ರಕ್ಷಣಾತ್ಮಕ ದರ ನೀಡಲಾಗುವುದು.

ಇದರಿಂದ ರೈತರಿಗೆ ದರ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಆಸರೆ ಸಿಗಲಿದೆ. ಕೆಲ ತಿಂಗಳ ಹಿಂದಿನಿಂದಲೇ ದರಕುಸಿತವಾಗಿರುವ ಕಾರಣ ಹಿಂದೆ ಆಗಿರುವ ನಷ್ವನ್ನೂ ರೈತರಿಗೆ ಭರಿಸಲು ತೀರ್ಮಾನಿಸಲಾಗಿದೆ. ರಕ್ಷಣಾತ್ಮಕ ದರವನ್ನು ಎಪ್ರಿಲ್ 1 ರಿಂದಲೇ ಅನ್ವಯವಾಗುವಂತೆ ನೀಡಲು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.