ADVERTISEMENT

ಮೈಸೂರಿನ ಫುಟ್ಸಲ್‌ ಆಟಗಾರ ಇಟಲಿಯಲ್ಲಿ ಸಾವು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 9:09 IST
Last Updated 12 ಆಗಸ್ಟ್ 2021, 9:09 IST
ಯಶವಂತಕುಮಾರ್
ಯಶವಂತಕುಮಾರ್    

ಮೈಸೂರು: ನಗರದ ಯುವ ಕ್ರೀಡಾಪಟು ಯಶವಂತಕುಮಾರ್ (23) ಇಟಲಿಯ ರೋಮ್‌ನಲ್ಲಿ ಇತ್ತೀಚೆಗೆ ಜಲಪಾತದಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟರು.

ಎನ್‌.ಆರ್‌.ಮೊಹಲ್ಲಾದ ಎನ್‌.ಕುಮಾರ್‌ ಮತ್ತು ಎನ್‌.ರೂಪಾ ದಂಪತಿ ಪುತ್ರರಾದ ಅವರು ಇಟಲಿಯ ‘ಸೀರಿ ಬಿ ಫುಟ್ಸಲ್‌ ಲೀಗ್‌’ನಲ್ಲಿ ಕ್ಯಾಲ್ಸಿಯೊ ಸಿ5 ತಂಡದ ಪರ ಆಡಲು ನಾಲ್ಕು ತಿಂಗಳ ಹಿಂದೆಯಷ್ಟೇ ತೆರಳಿದ್ದರು.

‘ಮೂರು ನಾಲ್ಕು ದಿನಗಳಿಂದ ಅವರ ಮೊಬೈಲ್‌ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ಆ.6 ರಂದು ತಂಡದ ಸಹ ಆಟಗಾರರಿಗೆ ಕರೆ ಮಾಡಿ ವಿಚಾರಿಸಿದಾಗ ಮೃತಪಟ್ಟ ವಿವರ ಲಭಿಸಿದೆ. ಜಲಪಾತದಲ್ಲಿ ಬಿದ್ದು ಮೃತಪಟ್ಟಿರುವುದನ್ನು ಅಲ್ಲಿನ ಪೊಲೀಸರೂ ಖಚಿತಪಡಿಸಿದ್ದಾರೆ. ಆ.31ರ ವರೆಗೆ ಅಲ್ಲಿಗೆ ವಿಮಾನ ಸೌಲಭ್ಯ ಇಲ್ಲ. ಆದ್ದರಿಂದ ಅಲ್ಲಿ ರುವ ಕನ್ನಡಿಗರು ಸೇರಿಅಂತ್ಯಕ್ರಿಯೆ ನೆರವೇರಿಸಿದ್ದಾರೆ’ ಎಂದು ಕುಟುಂಬದ ಮೂಲತಿಳಿಸಿದೆ.

ADVERTISEMENT

ಫುಟ್‌ಬಾಲ್‌ನ ರೂಪಾಂತರ ಕ್ರೀಡೆಯಾಗಿರುವ ಫುಟ್ಸಲ್‌ಅನ್ನು ಒಳಾಂಗಣದಲ್ಲಿ ಆಡಲಾಗುತ್ತದೆ. ಒಂದು ತಂಡದಲ್ಲಿ ಐವರು ಆಟ ಗಾರರು ಇರುವರು. ಯಶವಂತ ಸಣ್ಣ ವಯಸ್ಸಿನಲ್ಲೇ ಈ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ತರಬೇತಿ ಪಡೆದು ಕೊಂಡಿದ್ದರು. ವಿದ್ಯಾ ವರ್ಧಕ ಎಂಜಿನಿ ಯರಿಂಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ ಪೂರೈಸಿ ಇಟಲಿಗೆ ತೆರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.