ADVERTISEMENT

ಇದು ನೀವು ಕಟ್ಟಿದ ಪಕ್ಷ,ನೀವೇ ಹೊರಗೆ ಹೋದರೆ ಹೇಗೆ: ಎಂಟಿಬಿಗೆ ಪರಮೇಶ್ವರ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 6:53 IST
Last Updated 13 ಜುಲೈ 2019, 6:53 IST
   

ಬೆಂಗಳೂರು:‘ಎಂಟಿಬಿ ನಾಗರಾಜ್ ಅವರ ಹಲವು ಕಾರಣಗಳಿಂದ ರಾಜೀನಾಮೆ ಕೊಟ್ಟಿದ್ದಾರೆ. ಅವರ ಮನವೊಲಿಸಲು ಡಿಕೆ.ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರು ಸತತ ಪ್ರಯತ್ನ ಮಾಡಿದ್ದಾರೆ 45 ವರ್ಷಗಳಿಂದ ಹೊಸಕೋಟೆ ಭಾಗದಲ್ಲಿ ಪಕ್ಷವನ್ನು ಕಟ್ಟಿರುವ ಎಂಟಿಬಿ ರಾಜೀನಾಮೆ ಕೊಟ್ಟಿದ್ದು ಸರಿಕಾಣಲಿಲ್ಲ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

‘ಅವರ ಅಭಿಪ್ರಾಯಗಳಿಗೆ ಸ್ಪಂದಿಸುತ್ತೇವೆ. ಬೇಡಿಕೆಗಳನ್ನು ಈಡೇರಿಸುವ ಭರವಸೆ ಕೊಟ್ಟಿದ್ದೇವೆ. ಶಾಸಕ ಮತ್ತು ಸಚಿವ ಸ್ಥಾನಕ್ಕೆ ಕೊಟ್ಟಿರುವ ರಾಜೀನಾಮೆಯನ್ನು ಅವರು ತಕ್ಷಣ ಹಿಂಪಡೆಯಬೇಕು ಎಂದು ಮನವಿ ಮಾಡಿದ್ದೇವೆ. ನಮ್ಮಿಂದ ಮುಂದೆ ಇಂಥ ತಪ್ಪುಗಳು ಆಗುವುದಿಲ್ಲ ಆಗುವುದಿಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದು ಪರಮೇಶ್ವರ ನುಡಿದರು.

‘ಎಂಟಿಬಿ ಬೇಡಿಕೆಗಳಿಗೆ ಮುಖ್ಯಮಂತ್ರಿಯೂ ಸ್ಪಂದಿಸುತ್ತಾರೆ. ಸುಧಾಕರ ಅವರ ಮನವೊಲಿಸಿ. ಪಕ್ಷಕ್ಕೆ ಒಳಿತಾಗುವ ತೀರ್ಮಾನ ತೆಗೆದುಕೊಳ್ಳುವ ಭರವಸೆಯನ್ನು ಎಂಟಿಬಿ ನೀಡಿದ್ದಾರೆ. ಇದು ಅವರೇ ಕಟ್ಟಿದ ಪಕ್ಷ, ಕಾಂಗ್ರೆಸ್ ತೊಂದರೆಗೆ ಸಿಲುಕುವುದ ಬೇಡ. ಪಕ್ಷ ಎಲ್ಲರಿಗಿಂತಲೂ ದೊಡ್ಡದು. ಎಂಟಿಬಿ ನಮ್ಮ ಮನವಿಗೆ ಒಪ್ಪಿದ್ದಾರೆ. ಮುಂದೆ ಒಳ್ಳೇ ತೀರ್ಮಾನ ತಗೊಳ್ತಾರೆ’ ಎಂದು ಪರಮೇಶ್ವರ ಆಶಯ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.