ಬೆಳಗಾವಿ:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ ವಾಘ್ಮೋರೆ ಅವರನ್ನು ತನಿಖೆಗಾಗಿ ಬೆಳಗಾವಿಗೆ ಬುಧವಾರ ರಾತ್ರಿ ವಿಶೇಷ ತನಿಖಾ ದಳದ(ಎಸ್‌ಐಟಿ) ಅಧಿಕಾರಿಗಳು ಕರೆತಂದಿದ್ದಾರೆ.
ಗುಂಡು ಹೊಡೆಯುವ ತರಬೇತಿಯನ್ನು ಬೆಳಗಾವಿಯ ಅರಣ್ಯ ಪ್ರದೇಶದಲ್ಲಿ ಪಡೆದಿದ್ದಾಗಿ ಪರಶುರಾಮ ತನಿಖೆಯ ವೇಳೆ ಬಾಯ್ಬಿಟ್ಟಿದ್ದ.ಆ ಸ್ಥಳಗಳ ಪರಿಶೀಲನೆಗಾಗಿ ಎಸ್‌ಐಟಿ ಅಧಿಕಾರಿಗಳು ಪರಶುರಾಮನನ್ನು ಕರೆತಂದಿದ್ದಾರೆ.ಗುರುವಾರ ದಿನವಿಡೀ ಅಂತಹ ಪ್ರದೇಶಗಳ ಪರಿಶೀಲನೆ ನಡೆಸಿ ವಾಪಸ್ಸಾಗಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿಯನ್ನು ಜಿಲ್ಲೆಗೆ ಕರೆತಂದಿರುವ ಬಗ್ಗೆ ಖಚಿತ ಪಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರಕುಮಾರ ರೆಡ್ಡಿ, ‘ಯಾವ ಯಾವ ಪ್ರದೇಶಗಳಿಗೆ ಅವರನ್ನು ಎಸ್‌ಐಟಿ ಅಧಿಕಾರಿಗಳು ಕರೆದೊಯ್ಯಲಿದ್ದಾರೆ ಎನ್ನುವುದು ಗೊತ್ತಿಲ್ಲ.ಸ್ಥಳ ಪರಿಶೀಲನೆ ನಡೆಸಿದ ನಂತರ ರಾತ್ರಿ ವಾಪಸ್ ತೆರಳಬಹುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಇನ್ನಷ್ಟು:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.