ಕೊಪ್ಪಳದ ಗವಿಮಠ
ಕೊಪ್ಪಳ: ಐತಿಹಾಸಿಕ ಇಲ್ಲಿನ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವಕ್ಕೆ ಸಿದ್ಧತಾ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿದ್ದು ಜನವರಿ 15ರಂದು ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ.
ಜ. 11ರಂದು ಸಂಜೆ 5 ಗಂಟೆಗೆ ಬಸವಪಟ, 12ರಂದು ಸಂಜೆ 5 ಗಂಟೆಗೆ ಗವಿಮಠದ ಆವರಣದಲ್ಲಿರುವ ಕೆರೆಯಲ್ಲಿ ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮ, 13ರಂದು ಸಂಜೆ 5ಕ್ಕೆ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಕಳಸ ಮೆರವಣಿಗೆ ನಡೆಯಲಿವೆ.
14ರಂದು ಸಂಜೆ 5 ಗಂಟೆಗೆ ಕೈಲಾಸ ಮಂಟಪದಲ್ಲಿನ ಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವುದು, ಬಳಿಕ ಲಘು ರಥೋತ್ಸವ ಆಯೋಜನೆಯಾಗಿದೆ. 15ರಂದು ಮಹಾರಥೋತ್ಸವದ ಬಳಿಕ ಸಂಜೆ 6 ಗಂಟೆಗೆ ಕೈಲಾಸ ಮಂಟಪದಲ್ಲಿ ಧಾರ್ಮಿಕ ಗೋಷ್ಠಿ, ಅನುಭಾವಿಗಳ ಅಮೃತ ಚಿಂತನ ಗೋಷ್ಠಿಗಳು ಮೂರು ದಿನಗಳ ಕಾಲ ಜರುಗಲಿವೆ.
16ರಂದು ಸಂಜೆ 5ಕ್ಕೆ ಮಠದ ಆವರಣದಲ್ಲಿ ಬಳಗಾನೂರ ಶಿವಶಾಂತವೀರ ಶರಣರರಿಂದ ದೀರ್ಘದಿಂಡ ನಮಸ್ಕಾರ ಮತ್ತು ಮದ್ದು ಸುಡಲಾಗುತ್ತದೆ. 17ರಂದು ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಗವಿಮಠದ ಪ್ರಕಟಣೆ ತಿಳಿಸಿದೆ.
ರಥೋತ್ಸವ ಸಾಗುವ ಮೈದಾನ ಹಾಗೂ ಅಂಗಡಿ ಮುಂಗಟ್ಟುಗಳನ್ನು ಹಾಕುವ ಜಾತ್ರಾ ಆವರಣವನ್ನು ಸ್ವಚ್ಛಗೊಳಿಸುವ ಕೆಲಸ ಗುರುವಾರ ಆರಂಭಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.