ADVERTISEMENT

ತನುಶ್ರೀಗೆ 2 ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಗರಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 19:47 IST
Last Updated 23 ಫೆಬ್ರುವರಿ 2019, 19:47 IST
ಉಡುಪಿಯ ಸೇಂಟ್‌ ಸಿಸಿಲಿಸ್‌ ಸಮೂಹ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ‘ಧನುರಾಸನ’ ಹಾಕುವ ಮೂಲಕ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದ ಬಾಲಕಿ ತನುಶ್ರೀ ಪಿತ್ರೋಡಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಉಡುಪಿಯ ಸೇಂಟ್‌ ಸಿಸಿಲಿಸ್‌ ಸಮೂಹ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ‘ಧನುರಾಸನ’ ಹಾಕುವ ಮೂಲಕ ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದ ಬಾಲಕಿ ತನುಶ್ರೀ ಪಿತ್ರೋಡಿಗೆ ಪ್ರಮಾಣ ಪತ್ರ ವಿತರಿಸಲಾಯಿತು.   

ಉಡುಪಿ: ಇಲ್ಲಿನ ಸೇಂಟ್‌ ಸಿಸಿಲಿಸ್‌ ಸಮೂಹ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ಶನಿವಾರ ನಿಮಿಷಕ್ಕೆ 62 ಬಾರಿ ‘ಧನುರಾಸನ’ ಮಾಡಿ, ಅತಿ ವೇಗವಾಗಿ 100 ಬಾರಿ ಧನುರಾಸನ ಹಾಕಿ ಮೂಲಕ ಬಾಲಕಿ 10 ವರ್ಷದ ತನುಶ್ರೀ ಪಿತ್ರೋಡಿ 2 ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಮಾಡಿದಳು.

ದೇಹವನ್ನು ತಿರುಗಿಸುತ್ತಾ ಒಂದಾದ ಮೇಲೊಂದರಂತೆ ಆಸನ ಹಾಕುತ್ತಾ ಸಾಗಿದ ಪೋರಿ ವಿಶ್ವದಾಖಲೆಯ ಸಾಧನೆ ಮಾಡಿದಳು.

ಈ ಸಂದರ್ಭ ಗೋಲ್ಡನ್‌ ಬುಕ್‌ ಆಫ್ ವರ್ಲ್ಡ್‌ ರೆಕಾರ್ಡ್‌ ಸಂಸ್ಥೆಯ ಏಷ್ಯಾ ವಿಭಾಗದ ಮುಖ್ಯಸ್ಥ ಮನೀಷ್‌ ಬಿಷ್ಣೋಯಿ ಮಾತನಾಡಿ, ‘ತನುಶ್ರೀ ಪಿತ್ರೋಡಿ ಹಿಂದೆ 2 ಬಾರಿ ವಿಶ್ವದಾಖಲೆ ಮಾಡಿದ್ದರು. ಇದೀಗ ಮತ್ತೆರಡು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾಳೆ’ ಎಂದು ಘೋಷಿಸಿದರು.

ADVERTISEMENT

ಬಳಿಕ ತನುಶ್ರೀಗೆ ತಾತ್ಕಾಲಿಕ ಪ್ರಮಾಣ ಪತ್ರ ವಿತರಿಸಲಾಯಿತು. ಆಕೆಯ ತಂದೆ ಉದಯ ಕುಮಾರ್, ತಾಯಿ ಸಂಧ್ಯಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.