ADVERTISEMENT

ಹೊರಗುತ್ತಿಗೆ ಮೂಲಕ ಎಪಿಪಿ ನೇಮಕಕ್ಕೆ ಚಿಂತನೆ: ಕಾನೂನು ಸಚಿವ ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 20:15 IST
Last Updated 26 ಡಿಸೆಂಬರ್ 2019, 20:15 IST
   

ಕಾರವಾರ: ‘ರಾಜ್ಯದಲ್ಲಿ ಸರ್ಕಾರಿ ಅಭಿಯೋಜಕರ (ಪಿಪಿ) ಕೊರತೆ ನೀಗಿಸಲು ಹೊರಗುತ್ತಿಗೆಯ ಮಾದರಿಯಲ್ಲಿ ಸಹಾಯಕ ಅಭಿಯೋಜಕರನ್ನು (ಎಪಿಪಿ)ನೇಮಿಸಿಕೊಳ್ಳುವ ಚಿಂತನೆಯಿದೆ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರಜೊತೆ ಮಾತನಾಡಿದ ಅವರು,‘ಗೃಹ ಇಲಾಖೆಯು ಹೊಸ ಪಿ.ಪಿ.ಗಳ ನೇಮಕಾತಿ ಪ್ರಕ್ರಿಯೆ ಕೈಗೊಂಡಿದೆ. ಇದುಪೂರ್ಣಗೊಳ್ಳಲು ಒಂದೂವರೆಯಿಂದ ಎರಡು ವರ್ಷಗಳೇಬೇಕು. ಅಲ್ಲಿಯವರೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲು ಸರ್ಕಾರ ಉದ್ದೇಶಿಸಿದೆ’ ಎಂದರು.

‘ಸರ್ಕಾರಿ ವಕೀಲರು (ಜಿಪಿ) ಮತ್ತು ಸಹಾಯಕ ಸರ್ಕಾರಿವಕೀಲರ (ಎಜಿಪಿ)ನೇಮಕಾತಿಯನ್ನು ಕಾನೂನು ಇಲಾಖೆ ಮಾಡಲಿದೆ. ಇದಕ್ಕೆ ಪ್ರತಿಅಭ್ಯರ್ಥಿಯ ಮಾಹಿತಿಯನ್ನೂ ನಾನು ಕೇಳಿದ್ದೇನೆ. ಜ.2ರ ನಂತರ ಭೇಟಿ ಮಾಡುವಂತೆಅವರಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಜ.2ರವರೆಗೆ ರಜಾದಿನಗಳಿವೆ. ಇದರನಂತರ ಸರ್ಕಾರಿ ವಕೀಲರು ನ್ಯಾಯಾಲಯದ ಕಲಾಪಗಳಿಗೆ ಗೈರು ಹಾಜರಾದರೆ ಗಂಭೀರವಾದ ಕ್ರಮ ಎದುರಿಸಬೇಕಾಗುತ್ತದೆ. ಅವರನ್ನು ಬದಲಿಸುವುದಕ್ಕೂ ಹಿಂಜರಿಯುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.