ADVERTISEMENT

ಅ.13ರ ಬದಲು 20ಕ್ಕೆ ಸರ್ಕಾರಿ ರಜೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 19:37 IST
Last Updated 9 ಅಕ್ಟೋಬರ್ 2018, 19:37 IST
   

ಬೆಂಗಳೂರು: ಈ ತಿಂಗಳು ಸರ್ಕಾರಿ ನೌಕರರ ಎರಡನೇ ಶನಿವಾರದ ರಜೆ ರದ್ದುಪಡಿಸಿ ಮೂರನೇ ಶನಿವಾರ ರಜೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದೇ 18 ಹಾಗೂ 19ರಂದು ಆಯುಧಪೂಜೆ ಮತ್ತು ವಿಜಯದಶಮಿ ಪ್ರಯುಕ್ತ ಸಾರ್ವತ್ರಿಕ ರಜೆ ಇದೆ. 21ರಂದು ಭಾನುವಾರ. ಸರ್ಕಾರಿ ನೌಕರರು 20ರಂದು ಸಾಂದರ್ಭಿಕ ರಜೆ ಬಳಸಿಕೊಳ್ಳುವ ಸಾಧ್ಯತೆ ಇದೆ.

ಇದರಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ, ಇದೇ 13ರ ರಜೆ ರದ್ದುಪಡಿಸಿ 20ರಂದು ನೀಡಲು ತೀರ್ಮಾನಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.