ಜಿಎಸ್‌ಟಿ
ಬೆಂಗಳೂರು: ‘ಯುಪಿಐ ಮೂಲಕ ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿರುವ ಪ್ರಕರಣಗಳಲ್ಲಿ ಜಿಎಸ್‌ಟಿ ಪಾವತಿಸುವಲ್ಲಿ ನೆರವು ನೀಡುತ್ತೇವೆ ಎಂದು ಕೆಲ ಖಾಸಗಿ ವ್ಯಕ್ತಿಗಳು, ವರ್ತಕರಿಂದ ಹಣ ಕೇಳಿದರೆ ತಕ್ಷಣವೇ ನಮ್ಮ ಗಮನಕ್ಕೆ ತನ್ನಿ’ ಎಂದು ವಾಣಿಜ್ಯ ತೆರಿಗೆ ಇಲಾಖೆ ಕೋರಿದೆ.
ಜಿಎಸ್‌ಟಿ ಕಡಿಮೆ ಮಾಡಿಸುತ್ತೇವೆ, ನೋಟಿಸ್ ರದ್ದು ಮಾಡಿಸುತ್ತೇವೆ ಎಂದು ವರ್ತಕರಿಂದ ಕೆಲ ಖಾಸಗಿ ವ್ಯಕ್ತಿಗಳು ಹಣ ವಸೂಲಿ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಬಗ್ಗೆ ಸುದ್ದಿ ವಾಹಿನಿಗಳಲ್ಲಿ ವರದಿ ಪ್ರಸಾರವಾಗಿದೆ. ಅಂತಹ ವ್ಯಕ್ತಿಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಿ ಎಂದು ಕೋರಿದೆ.
ಖಾಸಗಿ ವ್ಯಕ್ತಿಗಳಿರಲಿ ಅಥವಾ ಇಲಾಖೆಯ ಸಿಬ್ಬಂದಿ/ಅಧಿಕಾರಿಗಳು ಹೀಗೆ ಹಣ ಕೇಳಿದರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. 1800 425 6300 ಸಂಖ್ಯೆಗೆ ಕರೆ ಮಾಡಿ, ದೂರು ನೀಡಿ ಎಂದು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.