ADVERTISEMENT

ಗೈಡಿಂಗ್‌ ಫೋರ್ಸ್‌: ಛಲ ತುಂಬಿದ ಸಾಧಕರು

ಇನ್‌ಸೈಟ್ಸ್‌ ಐಎಎಸ್‌, ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 21:00 IST
Last Updated 11 ಜನವರಿ 2020, 21:00 IST
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಕಾಂಕ್ಷಿಗಳು –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಕಾಂಕ್ಷಿಗಳು –ಪ್ರಜಾವಾಣಿ ಚಿತ್ರ   

ಬೆಂಗಳೂರು:ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಬೇಕು ಎಂಬ ಆಕಾಂಕ್ಷೆ ಹೊಂದಿದ್ದ ಸಾವಿರಾರು ಯುವಜನ ಅಲ್ಲಿ ಸಾಲುಗಟ್ಟಿ ನಿಂತಿದ್ದರು. ಅವರ ಕಂಗಳಲ್ಲಿ ಸಾಧಿಸುವ ಹಂಬಲವಿದ್ದರೆ, ಮನಸು ಮಾರ್ಗದರ್ಶನ ಬಯಸುತ್ತಿತ್ತು. ಗುರಿ ಸಾಧನೆಗೆ ಛಲ ಮೂಡಿಸುವ ಪ್ರೇರಣೆ ಬೇಕಿತ್ತು.

‘ಇನ್‌ಸೈಟ್ಸ್‌ ಐಎಎಸ್‌’ ಸಹಯೋಗದಲ್ಲಿ ಪ್ರಜಾವಾಣಿ– ಡೆಕ್ಕನ್‌ ಹೆರಾಲ್ಡ್‌ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಗೈಡಿಂಗ್‌ ಫೋರ್ಸ್‌’ ಕಾರ್ಯಾಗಾರವುಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಗುಟ್ಟು ತಿಳಿದುಕೊಳ್ಳುವಲ್ಲಿ ಅವರಿಗೆ ನೆರವಾಯಿತು. ಹಲವಾರುಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು, ಆಕಾಂಕ್ಷಿಗಳು ಮತ್ತು ಅವರ ಪೋಷಕರು ಕಾರ್ಯಾಗಾರದ ಪ್ರಯೋಜನ ಪಡೆದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ, ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿಎಂ.ಎನ್‌.ಅನುಚೇತ್‌, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್. ವೇಣುಗೋಪಾಲ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಸಲಹೆ ಮತ್ತು ಮಾರ್ಗದರ್ಶನ ನೀಡಿದರು.

ADVERTISEMENT

‍ಪರೀಕ್ಷೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಎದುರಾಗುವ ಅಡೆ–ತಡೆಗಳನ್ನು ದಾಟುವುದು ಹೇಗೆ? ಕೊನೆಯವರೆಗೆ ಏಕಾಗ್ರತೆ ಕಾಪಾಡಿಕೊಳ್ಳಲು ಏನು ಮಾಡಬೇಕು? ಕೆಲಸ–ಕುಟುಂಬದ ಒತ್ತಡದ ನಡುವೆಯೇ ಪರೀಕ್ಷೆಗೆ ಸಿದ್ಧವಾಗುವುದು ಹೇಗೆ ? ಪರೀಕ್ಷೆ ಬರೆಯುವ ವೇಳೆ ನಮ್ಮ ಯೋಜನೆ ಹೇಗಿರಬೇಕು ಎಂಬಂತಹ ಹಲವು ಪ್ರಶ್ನೆಗಳನ್ನು ಆಕಾಂಕ್ಷಿಗಳು ಕೇಳಿದರು.ಇವುಗಳನ್ನು ಸಮಾಧಾನಚಿತ್ತದಿಂದ ಆಲಿಸಿದ ಪರಿಣತರು, ತಮ್ಮ ಅನುಭವ ಆಧಾರದ ಮೇಲೆ ಸಮರ್ಪಕ ಉತ್ತರ ನೀಡಿದರು.

‘ಇನ್‌ಸೈಟ್ಸ್‌’ ಐಎಎಸ್‌ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕ ಜಿ.ಬಿ. ವಿನಯ್‌ಕುಮಾರ್ ಪರೀಕ್ಷಾ ಸಿದ್ಧತೆಯ ಬಗ್ಗೆ ಮತ್ತು ತರಬೇತಿ ಅವಶ್ಯಕತೆ ಬಗ್ಗೆ ವಿವರಿಸಿದರು.

ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಇದ್ದ ಭಯ, ಗೊಂದಲ ಹೋಗಲಾಡಿಸುವಲ್ಲಿ ಮತ್ತು ಆತ್ಮವಿಶ್ವಾಸ ಮೂಡಿಸುವಲ್ಲಿ ಕಾರ್ಯಾಗಾರ ಸಾಕಷ್ಟು ಸಹಕಾರಿಯಾಯಿತು ಎಂದು ಆಕಾಂಕ್ಷಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.