ADVERTISEMENT

ಸಿದ್ಧಗಂಗಾ ಶ್ರೀ ಎಲ್ಲ ಸಮುದಾಯಗಳ ಗುರು: ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 16:17 IST
Last Updated 21 ಜನವರಿ 2019, 16:17 IST
ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಸಿದ್ಧಗಂಗಾ ಶ್ರೀಗಳೊಡನೆ ಮಾತನಾಡಿದ್ದ ಕ್ಷಣ.
ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಸಿದ್ಧಗಂಗಾ ಶ್ರೀಗಳೊಡನೆ ಮಾತನಾಡಿದ್ದ ಕ್ಷಣ.   

ದಾವಣಗೆರೆ: ‘ಸಿದ್ಧಗಂಗಾ ಪೂಜ್ಯರು ಮತ್ತು ನಮ್ಮದು ಗುರು ಶಿಷ್ಯರ ಸಂಬಂಧವಾಗಿತ್ತು. 40 ವರ್ಷಗಳಿಂದ ಅವರ ಜತೆಗೆ ನಿಕಟ ಸಂಬಂಧ ಇತ್ತು. ಆ ಮಾರ್ಗವಾಗಿ ಹೋಗುವಾಗಲೆಲ್ಲ ಅವರನ್ನು ಭೇಟಿ ಮಾಡಿ ಆಶೀರ್ವಚನ ಪಡೆದು ಸಾಗುತ್ತಿದ್ದೆವು’ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಅವರು ಸಿದ್ಧಗಂಗಶ್ರೀಗಳ ಜತೆಗಿನ ಒಡನಾಟವನ್ನು

ನಿಜಗುಣ ಪ್ರಭು ತೋಂಟದಾರ್ಯ ಶ್ರೀ

ನೆನಪಿಸಿಕೊಂಡರು.

‘ಅವರ ನಡೆನುಡಿ, ಬದುಕು ನಮಗೆ ಮಾತ್ರವಲ್ಲ. ಎಲ್ಲ ಸಮುದಾಯಗಳಿಗೆ ಆದರ್ಶವಾಗಿತ್ತು. ಅವರು ಎಲ್ಲ ಧರ್ಮಗಳ ಅಧಿಕೃತ ಧರ್ಮಗುರುಗಳಾಗಿದ್ದರು. ಬಸವಣ್ಣಾದಿ ಶರಣರ ಕಾಯಕ ಮತ್ತು ದಾಸೋಹ ಸಿದ್ಧಾಂತದಡಿ ಕೆಲಸಗಳನ್ನು ಮಾಡುತ್ತಿದ್ದರು. ಜೀವದಯಾಪರವಾಗಿದ್ದರು. ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರಿದವರು. ಅವರ ಬದುಕಿನ ಹಾದಿ ಎಲ್ಲರ ಬದುಕಿನ ದಾರಿಯಾಗಲಿ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.