ADVERTISEMENT

ಸಾಹಿತ್ಯಾಸಕ್ತರು ಕುಟುಂಬದೊಂದಿಗೆ ಬನ್ನಿ, ಮಕ್ಕಳನ್ನು ಕರೆತನ್ನಿ: ಎಚ್ಚೆಸ್ವಿ

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಳೆಯಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 6:33 IST
Last Updated 4 ಫೆಬ್ರುವರಿ 2020, 6:33 IST
ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು –ಪ್ರಜಾವಾಣಿ ಚಿತ್ರ
ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರಿಗೆ ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು –ಪ್ರಜಾವಾಣಿ ಚಿತ್ರ    

ಕಲಬುರ್ಗಿ: ‘ನಗರಕ್ಕೆ ಬೆಳಗಿನ ಜಾವ ಬಂದಿದ್ದೇನೆ. ಇಷ್ಟೊಂದು ಜನ ಅಭಿಮಾನಿಗಳು‌ ಸ್ವಾಗತ ಕೋರುತ್ತಿರುವುದು ತುಂಬಾ ಖುಷಿ ಆಗಿದೆ. ಮೂರು ದಿನಗಳ ಕಾಲ ನಿಮ್ಮ ಜೊತೆ ಕಾಲ ಕಳೆಯುತ್ತೇನೆ’ ಎಂದು ಸಮ್ಮೇಳನಾಧ್ಯಕ್ಷ ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.

ರೈಲು ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಮ್ಮೇಳನ ಅರ್ಥಪೂರ್ಣವಾಗಿ ನಡೆಯುತ್ತದೆ. ಸಾಹಿತ್ಯಾಸಕ್ತರು ಕುಟುಂಬದೊಂದಿಗೆ ಬನ್ನಿ, ಮಕ್ಕಳನ್ನು ಕರೆತನ್ನಿ’ ಎಂದು ಮನವಿ ಮಾಡಿದರು.

ಸಮ್ಮೇಳನದ ನಿರ್ಣಯಗಳು ಕಾಗದಕ್ಕೆ ಸೀಮಿತವಾದ ಕುರಿತು ಪ್ರತಿಕ್ರಿಯಿಸಿ, ‘ಇವಾಗಲೇ ನಕಾರಾತ್ಮಕವಾಗಿ ಯೋಚನೆ ಮಾಡುವುದು ಬೇಡ. ಮಗು ಅಳದೆ ಇದ್ದರೆ ತಾಯಿ ಹಾಲು ಕೊಡುವುದಿಲ್ಲ. ನಾವು ಹೋರಾಟ ಮಾಡಬೇಕು, ಸರ್ಕಾರದ ಕಣ್ಣು ತೆರೆಸಬೇಕು. ಇಂದಲ್ಲ ನಾಳೆ ನಿರ್ಣಯಗಳು ಜಾರಿಗೆ ಬಂದೆ ಬರುತ್ತವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.