ADVERTISEMENT

ನಿರ್ಲಕ್ಷ್ಯದಿಂದಾಗುವ ಅನಾಹುತಗಳಿಗೆ ಅವಕಾಶ ನೀಡಬೇಡಿ: ಬಿಎಸ್‌ವೈಗೆ ಗೌಡರ ಪತ್ರ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 8:26 IST
Last Updated 10 ಏಪ್ರಿಲ್ 2020, 8:26 IST
   

ಬೆಂಗಳೂರು: ರೈತರ ಪಾಲಿಗೆ ಲಾಕ್‌ಡೌನ್‌ ಆತುರದ ನಿರ್ಧಾರದಂತೆ ಕಾಣುತ್ತಿದೆ.ರೈತರ, ಕೃಷಿ ಕಾರ್ಮಿಕರ, ದಿನಗೂಲಿ ನೌಕರರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಒತ್ತಾಯಿಸಿರುವ ಮಾಜಿ ಪ್ರಧಾನ ಮಂತ್ರಿ ಎಚ್‌.ಡಿ ದೇವೇಗೌಡ ಈ ಕುರಿತು ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಲಾಕ್ ಡೌನ್‌ನಿಂದಾಗಿಮಾರುಕಟ್ಟೆ ಸಿಗದೆ ರೈತರ ಬದುಕು ಉರಿಯುವ ಬೆಂಕಿಯಲ್ಲಿ ಬಿದ್ದಂತಾಗಿದೆ.ರೈತರ ಪಾಲಿಗೆ ಲಾಕ್ ಡೌನ್ ಆತುರದ ನಿರ್ಧಾರದಂತೆ ಕಾಣಿಸುತ್ತಿದೆ.ವೈರಾಣು ಕಾಣಿಸಿಕೊಂಡಿದ್ದರೂ ಎರಡು ತಿಂಗಳು‌ ಸುಮ್ಮನಿದ್ದ ಸರ್ಕಾರಮುಂದಾಲೋಚನೆ ಇಲ್ಲದೆ ತರಾತುರಿಯಲ್ಲಿ ಲಾಕ್‌ಡೌನ್ ಮಾಡಿದೆ. ಇದರಿಂದ ರಾಜ್ಯ ಹಾಗೂ ದೇಶದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.

ಲಾಕ್ ಡೌನ್ ವೇಳೆ ಗ್ರಾಮ ಮಟ್ಟದಲ್ಲೆ ಹಾಲು ಸಂಗ್ರಹಿಸಬೇಕಿತ್ತು. ತರಕಾರಿಯನ್ನು ಸರ್ಕಾರವೇ ಸಂಗ್ರಹಿಸಿ ಮಾರುಕಟ್ಟೆಗೆ ತರಬೇಕಿತ್ತು.ಹಾಪ್ ಕಾಮ್ಸ್, ಸಫಲ್, ನ್ಯಾಪೆಡ್, ಎಪಿಎಂಸಿ ಮೂಲಕ ತರಕಾರಿ‌ ಕೊಳ್ಳುವ ವ್ಯವಸ್ಥೆ ಮಾಡಬೇಕಿತ್ತು.ತರಕಾರಿ ಸಂಗ್ರಹಣೆ ಸಾಗಾಟ, ಮಾರಾಟ ನಿರ್ಬಂಧಿಸಬಾರದು.ಸಂಸ್ಕರಣಾ ಘಟಕಗಳಿಗೆ ಪೂರ್ಣ ವಿನಾಯತಿ‌ ನೀಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

ದೇಶದ ಯಾವುದೇ ಪ್ರದೇಶಕ್ಕೆ ಕೃಷಿ ಉತ್ಪನ್ನಗಳ ಅಡೆತಡೆ ಇಲ್ಲದ ಸಾಗಾಟಕ್ಕೆ ಮತ್ತು ಮಾರಾಟಕ್ಕೆ ಅನುವು ಮಾಡಿಕೊಡಬೇಕು.ತೋಟಗಾರಿಕೆ ಉತ್ಪನ್ನ ಮತ್ತು ಸಂಸ್ಕರಿಸಿದ ಪದಾರ್ಥಗಳ ರಫ್ತಿಗೆ ನಿರ್ಬಂಧ ಇರಬಾರದು. ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂದಇರಬಾರದು ಎಂದು ಅವರು ಒತ್ತಾಯಿಸಿದ್ದಾರೆ.

ದೇವೇಗೌಡರ ಟ್ವೀಟ್‌ನಲ್ಲಿ ಪತ್ರದ ಪೂರ್ಣಪಾಠ ಲಭ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.