ADVERTISEMENT

ಕುಮಾರಸ್ವಾಮಿ ಅವರೇ ದೇಶಬಿಟ್ಟು ತೊಲಗಿ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 6:56 IST
Last Updated 24 ಜನವರಿ 2020, 6:56 IST
   

ಚಿತ್ರದುರ್ಗ: ಪಾಕಿಸ್ತಾನದ ಬಗ್ಗೆ ಅತೀವ ಪ್ರೀತಿ ತೋರುತ್ತಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ದೇಶದಿಂದ ತೋಲಗುವುದು ಸೂಕ್ತ. ಅವರು ಹೆಚ್ಚು ಇಷ್ಟಪಡುವ ಪಾಕಿಸ್ತಾನದಲ್ಲಿ ನೆಲೆಸಲಿ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಜಕಾರಣದಲ್ಲಿ ಕುಮಾರಸ್ವಾಮಿ ಗಂಭೀರವಾಗಿ ವರ್ತಿಸುತ್ತಿಲ್ಲ. ಅವರು ಗಂಭೀರ ರಾಜಕಾರಣಿಯಾಗಿ ಉಳಿದಿಲ್ಲ. ಮಾಜಿ ಮುಖ್ಯಮಂತ್ರಿ ಆಗಿದ್ದ ಹಾಗೂ ಮಾಜಿ ಪ್ರಧಾನಿ ಅವರ ಪುತ್ರರಾದವರು ಹೀಗೆ ಪಾಕಿಸ್ತಾನದ ಬಗ್ಗೆ ಪ್ರೀತಿ ತೋರುವುದು ನೋವುಂಟು ಮಾಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತ ಹಿಂದೂ ರಾಷ್ಟ್ರ. ಇಲ್ಲಿ ಎಲ್ಲರೂ ಸಮಾನರು. ವೋಟ್ ಬ್ಯಾಂಕ್ ರಾಜಕಾರಣಕ್ಕೆ ದೇಶದ ಹಿತಾಸಕ್ತಿ ಬಲಿಕೊಡಲು ಬಿಜೆಪಿ ಬಿಡುವುದಿಲ್ಲ. ದೇಶ ಒಡೆಯುವ ಷಡ್ಯಂತ್ರಕ್ಕಾಗಿ‌ ಇಲ್ಲಸಲ್ಲದ ಮಾತು ಸರಿಯಲ್ಲ ಎಂದು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.

ADVERTISEMENT

ಕಾಂಗ್ರೆಸ್ ಸತ್ತು ಹೋಗಿದೆ. ಇಂತಹ ಡೆತ್ ಪಾರ್ಟಿಯ ಅಧ್ಯಕ್ಷ ಸ್ಥಾನಕ್ಕೆ ಕಿತ್ತಾಟ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕ ಸ್ಥಾನಕ್ಕೂ ಲಾಬಿ ನಡೆಯುತ್ತಿದೆ. ಸಿದ್ದರಾಮಯ್ಯ ಅವರಿಗೆ ಪಕ್ಷದಲ್ಲೇ ಸಹಮತವಿಲ್ಲ. ಇಂಗ್ಲಿಷ್ ಪದ ಬಳಸಿ ಆಗಾಗ ಬಿಜೆಪಿ ಟೀಕೆ ಮಾಡುವುದು ಅವರಿಗೆ ಅಭ್ಯಾಸವಾಗಿದೆ ಎಂದು ಕುಟುಕಿದರು.

ಚೀನಾದಲ್ಲಿ ಭೀತಿ ಸೃಷ್ಟಿಸಿದ ಕರೋನ ವೈರಸ್ ಕರ್ನಾಟಕ ಪ್ರವೇಶಿಸದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಆರೋಗ್ಯ ಇಲಾಖೆ ತಜ್ಞರ ತಂಡವೊಂದನ್ನು ರಚಿಸಲಾಗಿದೆ. ಎಲ್ಲ ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.