ADVERTISEMENT

ಆರೋಪಿಗಳ ಸ್ಥಳಾಂತರಕ್ಕೆ ಡಿಜಿಪಿ ಅಲೋಕ್ ಮೋಹನ್ ಕಾರಣ: ಎಚ್.ಡಿ.ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 6:20 IST
Last Updated 24 ಏಪ್ರಿಲ್ 2020, 6:20 IST
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ   

ಮೈಸೂರು:ಪಾದರಾಯನಪುರ ಪ್ರಕರಣದಲ್ಲಿಬಂಧಿತರನ್ನು ರಾಮನಗರ ಜೈಲಿಗೆ ಸ್ಥಳಾಂತರಿಸುವ ಬಂದಿಖಾನೆ ಡಿಜಿಪಿ ಅಲೋಕ್ ಮೋಹನ್ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ಗರಂ ಆಗಿದ್ದಾರೆ.

ಈ ಸಂಬಂಧಮೈಸೂರಿನಲ್ಲಿ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು,ಅಲೋಕ್ ಮೋಹನ್ ನನ್ನ ಮೇಲಿನ ದ್ವೇಷಕ್ಕೆ ಈ ರೀತಿ ಮಾಡಿದ್ದಾರೆ ಅನ್ನಿಸುತ್ತೆ.ನನ್ನ ಮೇಲಿನ ಕೋಪಕ್ಕೆ ನನ್ನ ಜನರಿಗೆ ತೊಂದರೆ ಕೊಟ್ಟಿದ್ದಾರೆ.ಈ ಬಗ್ಗೆ ತನಿಖೆ ಆಗಲೇಬೇಕು.

ನಾನೀಗಾಗಲೇ ಸಿಎಂ ಹಾಗೂ ಗೃಹ ಸಚಿವರಿಗೆ ಹೇಳಿದ್ದೇನೆ.ನಾನು ಸಿಎಂ ಆಗಿದ್ದ ಅವಧಿಯಲ್ಲಿ ಅಲೋಕ್ ಮೋಹನ್ ಬೆಂಗಳೂರು ಕಮಿಷನರ್ ಹುದ್ದೆ ಮೇಲೆ ಕಣ್ಣಿಟ್ಟಿದ್ದರು.ಈತನ ಇತಿಹಾಸ ತಿಳಿದೇ ನಾನು ಅವಕಾಶ ಕೊಟ್ಟಿರಲಿಲ್ಲ.ಇಂತಹ ಅಧಿಕಾರಿಗಳಿಂದಲೇ ಸರ್ಕಾರ ಸಾರ್ವಜನಿಕವಾಗಿ ಪದೇ ಪದೇ ಮುಜುಗರ ಅನುಭವಿಸುತ್ತಿದೆ.ಇದೇ ಮುಂದುವರೆದರೆ ಈಗ ನೀಡುತ್ತಿರುವ ಬೆಂಬಲ ನಿಲ್ಲಿಸಿ ಹೋರಾಟ ನಡೆಸಬೇಕಾಗುತ್ತೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಆರೋಪಿಗಳನ್ನು ಶಿಫ್ಟ್ ಮಾಡಬೇಡಿ ಎಂದು ಆಗಲೇ ಸರ್ಕಾರಕ್ಕೆ ಹೇಳಿದ್ದೆ.ಆದರೆ ಈಗ ಮೊದಲ ಕಂತಿನಲ್ಲಿ ಬಂದ 49 ಜನರ ಪೈಕಿ ಇಬ್ಬರಿಗೆ ಸೋಂಕು ತಗುಲಿದೆ.ಇದರಿಂದ ಇಡೀ ಜೈಲನ್ನು ಸೀಲ್ ಮಾಡಿ ಕ್ವಾರಂಟೈನ್ ಮಾಡಿ.ಅಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕುಟುಂಬಸ್ಥರು ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿ.ಈ ಘಟನೆಯಿಂದ ಗ್ರೀನ್ ಜೋನ್‌‌ನಲ್ಲಿದ್ದ ರಾಮನಗರದ ಜನ ಆತಂಕ ಅನುಭವಿಸುತ್ತಿದ್ದಾರೆ.

ಸ್ಥಳಾಂತರ ಸಂದರ್ಭದಲ್ಲಿ ಮೆಡಿಕಲ್ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಇಷ್ಟು ಸಮಸ್ಯೆ ಆಗಿದೆ.ಈಗಲೂ ಅವರನ್ನು ಮತ್ತೆ ಸ್ಥಳಾಂತರ ಮಾಡುವಾಗ ಎಚ್ಚರ ವಹಿಸಲಿ.ಬಂಧಿತರಿಗೆ ಪಿಪಿಇ ಕಿಟ್ ಬಳಸಿ ಸ್ಥಳಾಂತರ ಮಾಡಲಿ.ಸ್ಥಳಾಂತರ ವಿಚಾರದಲ್ಲೂ ಅಲೋಕ್ ಮೋಹನ್ ಹಸ್ತಕ್ಷೇಪ ಮಾಡುತ್ತಿದ್ದಾರೆ.ಜೈಲ್ ಮುಂದೆ ಬಂದಿದ್ದ ಬಸ್‌ಗಳನ್ನು ವಾಪಸ್ ಕಳುಹಿಸಿದ್ದಾರೆ.

ಸರ್ಕಾರದ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ಇವರು ಯಾರು ?ಬೆಂಗಳೂರಿನಲ್ಲೂ ಇವರ ಮೇಲೆ ನಿಗಾ ಇಟ್ಟ ಪೊಲೀಸರು ಕ್ವಾರಂಟೈನ್‌ಗೆ ಒಳಗಾಗಲಿ,ಬೆಂಗಳೂರಿನಿಂದ ರಾಮನಗರಕ್ಕೆ ಪಾದರಾಯನಪುರದವರನ್ನು ಕರೆ ತರುವಾಗ ಇದೇ ವಾಹನದಲ್ಲಿ ಐವರು ಪೊಲೀಸ್ ಇದ್ದರು. ಅವರನ್ನು ಕ್ವಾರಂಟೈನ್ ಗೊಳಪಡಿಸಲಿ.ಗೃಹ ಮಂತ್ರಿಗಳು ಇವರ ಉಢಾಫೆ ಮಾತು ನಂಬುವುದು ಬೇಡ.ಹೇಳಿರುವಂತೆ ಮಧ್ಯಾಹ್ನ 2 ವೇಳೆಗೆ ಇವರನ್ನು ಸ್ಥಳಾಂತರ ಮಾಡಿ.

ಪಾದರಾಯನಪುರ ಗಲಾಟೆಯಲ್ಲಿ ಬಂಧಿತರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಿ‌ ಬಾರಿ ತೊಂದರೆ ಮಾಡಿದ್ದಾರೆ.ಎರಡು ತಂಡಗಳಾಗಿ ಕರೆತಂದು ಅವರನ್ನು ತಲಾ 25 ಮಂದಿಯಂತೆ ಒಂದೇ ಕೊಠಡಿಯಲ್ಲಿ ಇರಿಸಿದ್ದಾರೆ.25 ಜನಕ್ಕೆ ಒಂದೇ‌ ಶೌಚಾಲಯ, ಒಂದೇ ನೀರಿನ ಪಾತ್ರೆ.ಅವರಿಗೆ ಊಟ ಬಡಿಸಿದವರ ಮನಸ್ಥಿತಿ ಕೂಡ ಕಷ್ಟ ಆಗಿದೆ.ಇದರಿಂದ ಇಡೀ ರಾಮನಗರ ಜಿಲ್ಲೆಯ ಅಧಿಕಾರಿಗಳೇ ಹೆದರಿ ಹೋಗಿದ್ದಾರೆ ಎಂದು ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.