ADVERTISEMENT

Covid-19 Karnataka Update | 8,865 ಹೊಸ ಪ್ರಕರಣ ದೃಢ, 104 ಮಂದಿ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2020, 13:55 IST
Last Updated 3 ಸೆಪ್ಟೆಂಬರ್ 2020, 13:55 IST
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಂಗ್ರಹ ಚಿತ್ರ   
""

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಒಂದೇ ದಿನ 3,189 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 29 ಮೃತಪಟ್ಟಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಇಂದು 8,865 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 104 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

‌ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3,70,206ಕ್ಕೆ ಏರಿಕೆಯಾಗಿದ್ದು, ಇದುವರೆಗೆ 6,054 ಮಂದಿ ಸಾವಿಗೀಡಾಗಿದ್ದಾರೆ.

7,122 ಮಂದಿ ಇಂದು ಬಿಡುಗಡೆಯಾಗಿದ್ದು, ಈವರೆಗೆ 2,68,035 ಮಂದಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 96,098 ಸಕ್ರಿಯ ಪ್ರಕರಣಗಳಿದ್ದು, 735 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,38,701ಕ್ಕೆ ತಲುಪಿದೆ. ಈವರೆಗೆ 2,066 ಮಂದಿ ಮೃತಪಟ್ಟಿದ್ದಾರೆ.

ಮೈಸೂರಿನಲ್ಲಿ 475, ಬೆಳಗಾವಿ 454, ಬಳ್ಳಾರಿ 424, ಧಾರವಾಡ 342, ದಕ್ಷಿಣ ಕನ್ನಡ 316, ಶಿವಮೊಗ್ಗ 251, ಹಾಸನ 252, ಮಂಡ್ಯ 239, ಉಡುಪಿ 228, ದಾವಣಗೆರೆ 222, ಕೊಪ್ಪಳ ಜಿಲ್ಲೆಯಲ್ಲಿ 226 ಪ್ರಕರಣಗಳು ದೃಢಪಟ್ಟಿವೆ.

71,124 ಜನರಿಗೆ ಕೋವಿಡ್ ಟೆಸ್ಟ್
ಬುಧವಾರ ಒಂದೇ ದಿನ ಒಟ್ಟು 71,124 ಮಂದಿಗೆ ಕೋವಿಡ್–19 ಮಾದರಿ‌ ಪರೀಕ್ಷೆ ನಡೆಸಲಾಗಿದ್ದು, ಇದುವರೆಗೆ ಒಟ್ಟು 31,23,918 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು 32,403 ಆ್ಯಂಟಿಜೆನ್‌ ಪರೀಕ್ಷೆ ಮತ್ತು 38,721 ಮಂದಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.