ADVERTISEMENT

ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ: ಹಲವು ಪ್ರದೇಶಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 7:59 IST
Last Updated 20 ಸೆಪ್ಟೆಂಬರ್ 2020, 7:59 IST
ಮಳೆಗೆ ಮುಳುಗಡೆಯಾಗಿರುವ ಬಾಳೆ ತೋಟ
ಮಳೆಗೆ ಮುಳುಗಡೆಯಾಗಿರುವ ಬಾಳೆ ತೋಟ    
""

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ಧಾರಕಾರವಾಗಿ ಮಳೆಯಾಗುತ್ತಿದೆ. ಶೃಂಗೇರಿಯ ಕುರುಬಗೇರಿ, ಗಾಂಧಿ ಮೈದಾನ, ಭಾರತೀ ತೀರ್ಥ ರಸ್ತೆ, ನೆಮ್ಮಾರ್‌ ರಸ್ತೆ ಜಲಾವೃತವಾಗಿವೆ.

ಕೊಪ್ಪ ತಾಲ್ಲೂಕಿನ ನಾರ್ವೆ ಸಮೀಪದ ಆರ್ಡಿಕೊಪ್ಪದಲ್ಲಿ ಬಾಳೆ, ಅಡಿಕೆ ತೋಟ, ನಾಟಿ ಭತ್ತದ ಗದ್ದೆ ಗಳಿಗೆ ನೀರು ನುಗ್ಗಿದೆ. ಜಯಪುರದಲ್ಲಿ ಅಂಗಡಿ ಮಳಿಗೆಯೊಂದ ಗೋಡೆ ಕುಸಿದಿದೆ.

ಶೃಂಗೇರಿ

ಮೂಡಿಗೆರೆ ತಾಲ್ಲೂಕಿನ ಜಾವಳಿ ಬಳಿ ಕಾರೊಂದು ಹಳ್ಳಕ್ಕೆ ಪಲ್ಟಿಯಾಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ತರೀಕೆರೆ ತಾಲ್ಲೂಕಿನ ಕಲ್ಹತ್ತಿ ಜಲಪಾತ, ಲಿಂಗದಹಳ್ಳಿ ಬಳಿಯ ಭೀಮನ ಹಳ್ಳಗಳು ಭೋರ್ಗರೆಯುತ್ತಿವೆ. ಹೇಮಾವತಿ, ತಂಗಾ, ಭದ್ರಾ ನದಿಯಲ್ಲಿ ನೀರು ಮಟ್ಟ ಏರಿಕೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.