ADVERTISEMENT

ಹೊಸಪೇಟೆಯಲ್ಲಿ ಎರಡು ತಾಸು ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 14:23 IST
Last Updated 17 ಸೆಪ್ಟೆಂಬರ್ 2020, 14:23 IST
ಸಂಜೆ ಸುರಿದ ಬಿರುಸಿನ ಮಳೆಗೆ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ನೀರು ಸಂಗ್ರಹವಾಗಿತ್ತು. ಭಕ್ತರು ಅದರಲ್ಲೇ ನಡೆದುಕೊಂಡು ಹೋಗಿ ದೇವರ ದರ್ಶನ ಮಾಡಿದರು
ಸಂಜೆ ಸುರಿದ ಬಿರುಸಿನ ಮಳೆಗೆ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ನೀರು ಸಂಗ್ರಹವಾಗಿತ್ತು. ಭಕ್ತರು ಅದರಲ್ಲೇ ನಡೆದುಕೊಂಡು ಹೋಗಿ ದೇವರ ದರ್ಶನ ಮಾಡಿದರು   

ಹೊಸಪೇಟೆ: ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಗುರುವಾರ ಸಂಜೆ ಎರಡು ತಾಸಿಗೂ ಹೆಚ್ಚು ಕಾಲ ಬಿರುಸಿನ ಮಳೆಯಾಗಿದೆ.
ಸಂಜೆ ನಾಲ್ಕು ಗಂಟೆಗೆ ಆರಂಭಗೊಂಡ ಮಳೆ ಸತತ ಗಂಟೆಗೂ ಅಧಿಕ ಸಮಯ ಸುರಿಯಿತು. ಕೆಲಹೊತ್ತು ಬಿಡುವು ಕೊಟ್ಟ ಮಳೆ ಪುನಃ ಸಂಜೆ 6.30ಕ್ಕೆ ಶುರುವಾಗಿ 7.30ರ ವರೆಗೆ ಜೋರಾಗಿ ಬಿತ್ತು. ನಂತರ ಜಿಟಿಜಿಟಿ ಮಳೆ ಮುಂದುವರೆದಿತ್ತು.

ಬೆಳಿಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇತ್ತು. ಮಧ್ಯಾಹ್ನ ಕೆಲಹೊತ್ತು ಬಿಸಿಲು ಕಾಣಿಸಿಕೊಂಡಿತ್ತು. ಸಂಜೆಯಾಗುತ್ತಿದ್ದಂತೆ ದಟ್ಟ ಕಾರ್ಮೋಡಗಳು ಕವಿದು ಜೋರಾಗಿ ಮಳೆ ಸುರಿಯಿತು.

ಬಿರುಸಿನ ಮಳೆಗೆ ಪಟೇಲ್‌ ನಗರ, ಚಿತ್ತವಾಡ್ಗಿ, ಬಸವೇಶ್ವರ ಬಡಾವಣೆ, ಚಪ್ಪರದಹಳ್ಳಿಯಲ್ಲಿ ಚರಂಡಿಗಳು ಉಕ್ಕಿ ಹರಿದಿವೆ. ಹೊಲಸು ರಸ್ತೆ ಮೇಲೆಲ್ಲ ಹರಿದಾಡಿ ದುರ್ಗಂಧ ಹರಡಿತು. ತಾಲ್ಲೂಕಿನ ಹಂಪಿ, ಕಮಲಾಪುರ, ಕಡ್ಡಿರಾಂಪುರ, ನಾಗೇನಹಳ್ಳಿ, ಹೊಸೂರು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.