ADVERTISEMENT

ಮಧುಗಿರಿಯಲ್ಲಿ ಮಳೆ ಕುಮುದ್ವತಿಗೆ ಜೀವಕಳೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2019, 20:36 IST
Last Updated 12 ಅಕ್ಟೋಬರ್ 2019, 20:36 IST
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ತಿಂಗಳೂರು ಹಾಗೂ ಕಲಿದೇವಪುರ ಗ್ರಾಮಗಳ ಕೆರೆಗಳಿಗೆ ಕುಮುದ್ವತಿ ನದಿಯ ನೀರು ಶನಿವಾರ ಹರಿದಿದ್ದು ಚಿಣ್ಣರು ನೀರಿನಲ್ಲಿ ಸಂಭ್ರಮಿಸಿದರು.
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ತಿಂಗಳೂರು ಹಾಗೂ ಕಲಿದೇವಪುರ ಗ್ರಾಮಗಳ ಕೆರೆಗಳಿಗೆ ಕುಮುದ್ವತಿ ನದಿಯ ನೀರು ಶನಿವಾರ ಹರಿದಿದ್ದು ಚಿಣ್ಣರು ನೀರಿನಲ್ಲಿ ಸಂಭ್ರಮಿಸಿದರು.   

ಕೊಡಿಗೇನಹಳ್ಳಿ (ಮಧುಗಿರಿ ತಾ): ಮಧುಗಿರಿ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಶುಕ್ರವಾರ ರಾತ್ರಿ ಉತ್ತಮವಾಗಿ ಮಳೆ ಸುರಿದಿದೆ. ಹಲವು ವರ್ಷಗಳಿಂದ ನೀರಿಲ್ಲದೆ ಬತ್ತಿದ್ದ ಕುಮುದ್ವತಿ ನದಿ ಮೈದುಂಬಿ ಹರಿಯುತ್ತಿದ್ದಾಳೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಎಮ್ಮೆಗುಡ್ಡದಲ್ಲಿ ನದಿ ಹುಟ್ಟುತ್ತದೆ. ಗೌರಿಬಿದನೂರು ತಾಲ್ಲೂಕಿನಲ್ಲಿ ಹಾದು ಮಧುಗಿರಿ ತಾಲ್ಲೂಕಿನ ಶ್ರಾವಂಡನಹಳ್ಳಿ, ತಿಂಗಳೂರು, ಯಾಕಾರ್ಲಾಹಳ್ಳಿ, ಗುಂಡಗಲ್ಲು, ಕಡಗತ್ತೂರು, ಪರ್ತಿಹಳ್ಳಿ, ಕಸಿನಾಯಕನಹಳ್ಳಿ ಮೂಲಕ ಆಂಧ್ರಪ್ರದೇಶದತ್ತ ಕುಮುದ್ವತಿ ಸಾಗುತ್ತದೆ.

ಇತ್ತೀಚೆಗೆ ದೊಡ್ಡಬಳ್ಳಾ‍ಪುರ ಮತ್ತು ಗೌರಿಬಿದನೂರು ತಾಲ್ಲೂಕಿನಲ್ಲಿ ಉತ್ತಮ ಮಳೆ ಸುರಿದ ಕಾರಣ ಕುಮುದ್ವತಿ ನದಿಗೆ ಜೀವ ಕಳೆ ಬಂದಿತ್ತು. ಶನಿವಾರ ರಾತ್ರಿ ಕೊಡಿಗೇನಹಳ್ಳಿ ಹೋಬಳಿಯ ತಿಂಗಳೂರು ಹಾಗೂ ಕಲಿದೇವಪುರ ಕೆರೆಗಳು ತುಂಬಿವೆ.

ADVERTISEMENT

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನಾದ್ಯಂತ ಶನಿವಾರ ಸಂಜೆ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ. ಕಡೂರು ಪಟ್ಟಣ, ತಂಗಲಿ, ಮಲ್ಲೇಶ್ವರ, ಬಿಳುವಾಲ, ಯಳ್ಳಂಬಳಸೆ, ಮಚ್ಚೇರಿ ಮುಂತಾದೆಡೆ ಉತ್ತಮ ಮಳೆಯಾಯಿತು. ತಾಲ್ಲೂಕಿನ ಜೀವನಾಡಿ ವೇದಾವತಿ ನದಿ ತುಂಬಿ ಹರಿಯುತ್ತಿದೆ. ತಂಗಲಿ ಮತ್ತು ಎಂ.ಕೋಡಿಹಳ್ಳಿ ಕೆರೆಗಳಿಗೆ ನೀರು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.