ADVERTISEMENT

ಹೇಮರಡ್ಡಿ ಮಲ್ಲಮ್ಮ ಜಯಂತಿ; ರೆಡ್ಡಿ ಸಮಾಜದ ಕೊಡುಗೆ ಅಪಾರ

ಹೇಮರಡ್ಡಿ ಮಲ್ಲಮ್ಮ ಜಯಂತಿ; ಮಾಜಿ ಸಚಿವ ಜನಾರ್ಧನರೆಡ್ಡಿ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಮೇ 2022, 2:48 IST
Last Updated 23 ಮೇ 2022, 2:48 IST
ಸೇಡಂ ಸಮೀಪದ ಹೂಡಾ(ಬಿ) ಗ್ರಾಮದಲ್ಲಿ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಮಾಜಿ ಸಚಿವ ಜನಾರ್ಧನರೆಡ್ಡಿ ಉದ್ಘಾಟಿಸಿದರು. ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯ, ಹಾಲಪ್ಪಯ್ಯ ಮಠದ ಪಂಚಾಕ್ಷರಿ ಸ್ವಾಮೀಜಿ ಇದ್ದರು
ಸೇಡಂ ಸಮೀಪದ ಹೂಡಾ(ಬಿ) ಗ್ರಾಮದಲ್ಲಿ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಮಾಜಿ ಸಚಿವ ಜನಾರ್ಧನರೆಡ್ಡಿ ಉದ್ಘಾಟಿಸಿದರು. ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯ, ಹಾಲಪ್ಪಯ್ಯ ಮಠದ ಪಂಚಾಕ್ಷರಿ ಸ್ವಾಮೀಜಿ ಇದ್ದರು   

ಸೇಡಂ: ಕರ್ನಾಟದ ರಾಜಕೀಯ ಬೆಳವಣಿಗೆಯಲ್ಲಿ ರೆಡ್ಡಿ ಸಮಾಜದ ಕೊಡುಗೆ ಅಪಾರವಾಗಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಇದೇ ರೆಡ್ಡಿ ಸಮಾಜ ಹಗಲಿರುಳು ಶ್ರಮಿಸಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಹೇಳಿದರು.

ತಾಲ್ಲೂಕಿನ ಹೂಡಾ ಬಿ. ಗ್ರಾಮದ ಸಮೀಪದ ಹೇಮರಡ್ಡಿ ಮಲ್ಲಮ್ಮ ದೇವಾಲಯದಲ್ಲಿ ಭಾನುವಾರ ತಾಲ್ಲೂಕು ರೆಡ್ಡಿ ಸಮಾಜ ಆಯೋಜಿಸಿದ್ಧ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಸೇಡಂನ ರೆಡ್ಡಿ ಸಮಾಜದವರು ಶಿಲೆಯಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣ ಮಾಡುತ್ತಿ ರುವುದು ಶ್ಲಾಘನೀಯ. ದೇವಸ್ಥಾನ ಪೂರ್ಣಗೊಳಿಸುವ ಕಾರ್ಯ ನನ್ನದು ಎಂದು ಭರವಸೆ ನೀಡಿದರು.

ADVERTISEMENT

ತೆಲಂಗಾಣ ಟಿಪಿಸಿಸಿ ಅಧ್ಯಕ್ಷ ರೇವಂತರೆಡ್ಡಿ ಮಾತನಾಡಿ, ರೆಡ್ಡಿ ಸಮಾಜದ ರೆಡ್ಡಿ ಅಂದರೆ ಅದೊಂದು ಶಕ್ತಿ. ಬಡವ, ಬಲ್ಲಿದ, ಸಹಾಯ ಕೇಳಿ ಬಂದವರಿಗೆ ನೀಡುವಂತಹ ತಾಕತ್ತು. ಇದನ್ನು ನಮಗೆ ಕೊಟ್ಟವರು ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಎಂದರು.

ಶಾಸಕ ಸೋಮಶೇಖರರೆಡ್ಡಿ ಮಾತನಾಡಿ, ರೆಡ್ಡಿ ಕುಲಕ್ಕೆ ಬಡತನವಿ ರಬಾರದು ಎಂಬ ವರ ಬೇಡುವ ಮೂಲಕ ರೆಡ್ಡಿ ಕುಲದ ಹಿತ ಬಯಸಿದ ಮಹಾಸಾದ್ವಿ ನಮ್ಮ ಕುಲದ ಆರಾಧ್ಯ ದೇವತೆ. ದೇವಸ್ಥಾನ ನಿರ್ಮಾಣ ಕಾರ್ಯಕ್ಕೆ ₹ 10 ಲಕ್ಷ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.

ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಮಹಿಳಾ ಕುಲಕ್ಕೆ ಮಾದರಿಯಾಗಿದ್ದಾರೆ. ದೇವಸ್ಥಾನ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಜೆಡಿಎಸ್‌ ಮುಖಂಡ ಕಲಬುರಗಿ ಕೃಷ್ಣಾರೆಡ್ಡಿ ಮಾತನಾಡಿ, ರೆಡ್ಡಿ ಸಮಾಜದ ಹಿರಿಯರು ಯುವಕರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವಂತಹ ಕೆಲಸ ಮಾಡಬೇಕಿದೆ. ಅಲ್ಲದೆ ರೆಡ್ಡಿ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಸರ್ಕಾರಕ್ಕೆ ಗಮನ ತರಬೇಕು’ ಎಂದರು.

ವಿಖಾರಾಬಾದ್ ಜಿಲ್ಲಾ ಪರಿಷತ್ ಅಧ್ಯಕ್ಷೆ ಪಟ್ಟನಿ ಸುನಿತಾರೆಡ್ಡಿ ಮಾತ ನಾಡಿ, ದೇವಾಲಯ ನಿರ್ಮಾಣಕ್ಕೆ ₹ 2 ಲಕ್ಷ ದೇಣಿಗೆ ನೀಡಿದರು.

ಸಿಂಧನೂರ ಶಾಸಕ ವೆಂಕಟರಾವ ನಾಡಗೌಡ, ತಾಂಡೂರು ಶಾಸಕ ರೋಹಿತರೆಡ್ಡಿ, ಹೆಡಗಿಮದ್ರಿ ಶಾಂತಮಲ್ಲಿಕಾರ್ಜುನ ಶಿವಯೋಗಿ ಮಾತನಾಡಿದರು.

ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ಕೋಡ್ಲಾ ರವಿ ಸ್ವಾಮಿ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಚಂದ್ರಶೇಖರರೆಡ್ಡಿ ದೇಶಮುಖ, ತಾಲ್ಲೂಕು ರೆಡ್ಡಿ ಸಮಾಜ ಅಧ್ಯಕ್ಷ ನಾಗಭೂಷಣರೆಡ್ಡಿ ಪಾಟೀಲ, ಶರಣರೆಡ್ಡಿ ಜಿಲ್ಲೇಡಪಲ್ಲಿ, ಶಿವಲಿಂಗರೆಡ್ಡಿ, ಲತಾ, ಮುರುಗೇಂದ್ರರೆಡ್ಡಿ ಇದ್ದರು.

5 ಕಿ.ಮೀ. ಬೈಕ್ ರ‍್ಯಾಲಿ: ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯದಿಂದ ಆರಂಭಗೊಂಡ ಬೈಕ್ ರ‍್ಯಾಲಿ ಚೌರಸ್ತಾ, ರೈಲ್ವೆ ನಿಲ್ದಾಣ, ಮುಖ್ಯರಸ್ತೆ, ಬಸ್‌ ನಿಲ್ದಾಣ, ಜಿ.ಕೆ.ಕ್ರಾಸ್, ಕೋಡಂಲ್ ರಸ್ತೆ ಮೂಲಕ ಹೂಡ ಬಳಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದವರೆಗೆ ಅತ್ಯಂತ ಸಂಭ್ರಮದಿಂದ ಬೈಕ್ ರ‍್ಯಾಲಿ ನಡೆಯಿತು. ಯುವಕರು ಕೇಸರಿ ಶಾಲು ಧರಿಸಿ, ಬೈಕ್‌ಗೆ ಕೇಸರಿ ಧ್ವಜ ಕಟ್ಟಿ ಹೇಮರಡ್ಡಿ ಮಲ್ಲಮ್ಮನವರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.