ADVERTISEMENT

ವಿಡಿಯೊ ಕಾನ್ಫರೆನ್ಸ್ ವಿಚಾರಣೆ: ಸಹಾಯವಾಣಿ ಆರಂಭಿಸಿದ ಹೈಕೋರ್ಟ್‌ 

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 16:03 IST
Last Updated 27 ಏಪ್ರಿಲ್ 2020, 16:03 IST
   

ಬೆಂಗಳೂರು: ಲೌಕ್‌ಡೌನ್ ಪರಿಣಾಮ ಕೋರ್ಟ್‌ಗಳ ಕಲಾಪ ಸ್ಥಗಿತಗೊಂಡಿರುವುದರಿಂದ ತುರ್ತು ಅರ್ಜಿಗಳನ್ನು ಇ-ಫೈಲಿಂಗ್ ಮೂಲಕ ದಾಖಲಿಸಲು ಮತ್ತು ವಿಡಿಯೊ ಕಾನ್ಫರೆನ್ಸ್ ನಲ್ಲಿ ವಿಚಾರಣೆ ನಡೆಸುವ ದಿಸೆಯಲ್ಲಿ ಹೈಕೋರ್ಟ್ ಸಹಾಯವಾಣಿ ಆರಂಭಿಸಿದೆ.

ಇದರಿಂದ ವಕೀಲರು, ಸ್ವಯಂ ವಾದ ಮಂಡಿಸುವವರಿಗೆ ಮತ್ತು ವ್ಯಾಜ್ಯ ಕರ್ತರಿಗೆ ಅಗತ್ಯ ಮಾರ್ಗದರ್ಶನ ಸಿಗಲಿದೆ.

ಸುಪ್ರೀಂ ಕೊರ್ಟ್ ಇದೇ 6ರಂದು ಹೊರಡಿಸಿದ ಆದೇಶದ ಮೇರೆಗೆ ಹೈಕೋರ್ಟ್ ಬೆಂಗಳೂರು ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರ್ಗಿ ನ್ಯಾಯಪೀಠಗಳಲ್ಲಿ ಈ ಸಹಾಯವಾಣಿ ಆರಂಭಿಸಲಾಗಿದೆ.

ADVERTISEMENT

ಅರ್ಜಿ ಸಲ್ಲಿಸುವವರು ಬೆಂಗಳೂರು ಪ್ರಧಾನ ಪೀಠ- 14620, ಧಾರವಾಡ-14621 ಮತ್ತು ಕಲಬುರ್ಗಿ ಪೀಠ-14622 ಸಹಾಯ ವಾಣಿಗೆ ಕೋರ್ಟ್ ಕಚೇರಿ ಸಮಯದಲ್ಲಿ ಕರೆ ಮಾಡಬಹುದು ಎಂದು ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ ಅವರು ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.