ADVERTISEMENT

ಸರ್ಕಾರಿ ಪದವಿ ಕಾಲೇಜು: 26,900 ಸೀಟು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 16:36 IST
Last Updated 26 ಜೂನ್ 2025, 16:36 IST
   

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿವಿಧ ಕೋರ್ಸ್‌ಗಳಲ್ಲಿ ಹೆಚ್ಚುವರಿ 26,900 ಸೀಟುಗಳನ್ನು ಸೇರ್ಪಡೆ ಮಾಡಲು ಕಾಲೇಜು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. 

ಬಿ.ಎ, ಬಿ.ಕಾಂ, ಬಿ.ಎಸ್‌ಸಿ ಮೂರೂ ಕೋರ್ಸ್‌ಗಳಲ್ಲಿ ಸೀಟುಗಳ ಸಂಖ್ಯೆ ಹೆಚ್ಚಳ ಮಾಡಿದೆ. ಕಲಾ ವಿಭಾಗ ಒಂದರಲ್ಲೇ 13,905 ಹೆಚ್ಚುವರಿ ಸೀಟುಗಳಿಗೆ ಅವಕಾಶ ನೀಡಲಾಗಿದೆ. ಯುಪಿಎಸ್‌ಸಿ ಮತ್ತಿತರ ಸ್ಪರ್ಧಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಪದವಿ ಹಂತದಲ್ಲಿ ಕಲಾ ವಿಭಾಗದ ಕೆಲ ಕೋರ್ಸ್‌ಗಳಿಗೆ ಹೆಚ್ಚಿನ ಒಲವು ತೋರುತ್ತಿರುವುದು ಸೀಟುಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ಇಲಾಖೆ ಹೇಳಿದೆ. ವಾಣಿಜ್ಯ ವಿಭಾಗದಲ್ಲಿ 4,130, ವಿಜ್ಞಾನ ವಿಭಾಗದಲ್ಲಿ 4,856 ಸೀಟುಗಳನ್ನು ಸೇರ್ಪಡೆ ಮಾಡಲಾಗಿದೆ.

ಶಿಷ್ಯವೇತನ ಸಹಿತ ವೃತ್ತಿ ತರಬೇತಿಗೆ ಅವಕಾಶ ಇರುವ ಕೋರ್ಸ್‌ಗಳಿಗೆ ಬೇಡಿಕೆ ಹೆಚ್ಚಿದೆ. ಇಂತಹ ಕೋರ್ಸ್‌ಗಳಲ್ಲಿ ವಿವಿಧ ಕಂಪನಿಗಳು ವಿದ್ಯಾರ್ಥಿಗಳಿಗೆ ₹8,000ದಿಂದ ₹18,000ದವರೆಗೆ ಶಿಷ್ಯವೇತನ ನೀಡುತ್ತಿವೆ. 45 ಕಾಲೇಜುಗಳಲ್ಲಿ ಇದ್ದ ಶಿಷ್ಯವೇತನ ಸಹಿತ ವೃತ್ತಿ ಶಿಕ್ಷಣ ಕೋರ್ಸ್‌ಗಳನ್ನು ಈ ಬಾರಿ 85 ಕಾಲೇಜುಗಳಿಗೆ ವಿಸ್ತರಿಸಲಾಗಿದೆ. ಬಿಬಿಎ ಮತ್ತು ಬಿಸಿಎ ಕೋರ್ಸ್‌ಗಳಿಗೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಅನುಮತಿ ಪಡೆಯುವಂತೆ ಇಲಾಖೆ ಷರತ್ತು ವಿಧಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.