ADVERTISEMENT

ಉಪ್ಪಿನಂಗಡಿ: ಕಾರಿಡಾರಿನಲ್ಲೂ ಹಿಜಾಬ್ ನಿಷೇಧ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 19:31 IST
Last Updated 4 ಜೂನ್ 2022, 19:31 IST
ಹಿಜಾಬ್: ಪ್ರಾತಿನಿಧಿಕ ಚಿತ್ರ
ಹಿಜಾಬ್: ಪ್ರಾತಿನಿಧಿಕ ಚಿತ್ರ   

ಉಪ್ಪಿನಂಗಡಿ (ದಕ್ಷಿಣ ಕನ್ನಡ): ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಾರಿಡಾರ್‌ನಲ್ಲೂ ಹಿಜಾಬ್‌ ನಿಷೇಧಿಸಿ ಶಾಸಕ ಸಂಜೀವ ಮಠಂದೂರು
ಅಧ್ಯಕ್ಷತೆಯಲ್ಲಿ ನಡೆದ ಕಾಲೇಜು ಅಭಿವೃದ್ಧಿ ಸಮಿತಿಯ (ಸಿಡಿಸಿ) ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಇದನ್ನು ವಿರೋಧಿಸಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಬುರ್ಖಾ ಧರಿಸಿಕೊಂಡು ವಿಶ್ರಾಂತಿ ಕೊಠಡಿಯಲ್ಲಿ ಕುಳಿತ ವಿದ್ಯಾರ್ಥಿನಿಯರು ಮಧ್ಯಾಹ್ನದ ನಂತರ ಮನೆಗೆ ತೆರಳಿದರು.

ಹಿಜಾಬ್‌ಗೆ ಸಂಬಂಧಿಸಿದ ಕೋರ್ಟ್‌ ತೀರ್ಪು ತರಗತಿ ಕೊಠಡಿಯೊಳಗೆ ಮಾತ್ರ ಅನ್ವಯಿಸುತ್ತದೆ ಎಂದು ವಾದಿಸಿ, ವಿದ್ಯಾರ್ಥಿನಿಯರು ಕಾರಿಡಾರ್‌ನಲ್ಲಿ ಹಿಜಾಬ್ ಧರಿಸಿ ಸುತ್ತಾಡುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ ಎಂಬ ಕಾರಣಕ್ಕೆ ಕಾರಿಡಾರ್‌ನಲ್ಲೂ ಹಿಜಾಬ್‌ಗೆ ನಿಷೇಧ ಹೇರಲಾಗಿದೆ ಎಂಬುದು ಸಮಿತಿಯ ಹೇಳಿಕೆ.

ADVERTISEMENT

ಈ ನಡುವೆ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿ ಪತ್ರಕರ್ತರ ವಿರುದ್ಧ ಕೆಲ ವಿದ್ಯಾರ್ಥಿನಿಯರು ದಾಖಲಿಸಿರುವ ಪ್ರಕರಣವನ್ನು ವಾಪಸ್ ಪಡೆಯುವಂತೆ ಶಾಸಕ ಸಂಜೀವ ಮಠಂದೂರು ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.