ADVERTISEMENT

ಕಿತಾಬ್‌ ಮರೆತು ಮಕ್ಕಳ ಹೆರುವ ಯಂತ್ರವಾಗಬೇಡಿ: ಪ್ರತಾಪ ಸಿಂಹ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2022, 19:32 IST
Last Updated 13 ಫೆಬ್ರುವರಿ 2022, 19:32 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ಮೈಸೂರು: ‘ಹಿಜಾಬ್‌ ಬೇಕೆಂದು ಕಿತಾಬ್‌ (ಪುಸ್ತಕ) ಮರೆತು ಮಕ್ಕಳನ್ನು ಹೆರುವ ಯಂತ್ರವಾಗಿ ಉಳಿಯಬೇಡಿ. ಹಿಜಾಬ್‌ ಧರಿಸಬೇಕು ಎಂದು ಹಟ ಹಿಡಿಯುವರಿಗೆ ಹಿಜಾಬ್‌ ಬೇಕೇ, ಕಿತಾಬ್‌ ಬೇಕೇ ಎಂದು ಪ್ರಶ್ನಿಸುವೆ’ ಎಂದುಸಂಸದ ಪ್ರತಾಪಸಿಂಹ ಹೇಳಿದರು.

‘ವಿದ್ಯೆ ಕಲಿತು ಮುಖ್ಯವಾಹಿನಿಗೆ ಬಂದು ಸ್ವತಂತ್ರ ಜೀವನ ನಡೆಸಲಿ ಎಂಬುದೇ ನಮ್ಮ ಉದ್ದೇಶ. ಕಿತಾಬ್‌ ಹಿಂದೆ ಹೋದವರು ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್, ನಿರ್ಮಲಾ ಸೀತಾರಾಮನ್ ಆಗಿ ಹೆಸರು ಪಡೆದಿದ್ದಾರೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಹಿಜಾಬ್‌ ವಿವಾದದಲ್ಲಿ ಶಾಂತಿ ಕಾಪಾಡಿ ಎಂದು ಮನವಿ ಮಾಡಿದ್ದು ಸಾಕು. ಶಾಂತಿ ಕದಡುವವರ ವಿರುದ್ಧಸರ್ಕಾರ ಕ್ರಮಕೈಗೊಳ್ಳಲಿ. ಹಿಜಾಬ್‌ ವಿವಾದದ ಹಿಂದೆ ಕೆಎಫ್‌ಡಿ, ಪಿಎಫ್‌ಐ ಸಂಘಟನೆ ಕೈವಾಡವಿದ್ದು, ಅವುಗಳನ್ನು ನಿಷೇಧಿಸಲಿ’ ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.