ADVERTISEMENT

'ಹಿಂದೂ ವಿರೋಧಿ ಕಾಂಗ್ರೆಸ್'- ಬಿಜೆಪಿಯಿಂದ ಟೂಲ್ ಕಿಟ್: ಪ್ರಿಯಾಂಕ್ ಖರ್ಗೆ ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2022, 14:01 IST
Last Updated 18 ಸೆಪ್ಟೆಂಬರ್ 2022, 14:01 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಬೆಂಗಳೂರು: ಕಾಂಗ್ರೆಸ್ ವಿರುದ್ಧ ಬಿಜೆಪಿ ಟೂಲ್ ಕಿಟ್ ಬಳಸಿಕೊಳ್ಳುತ್ತಿದೆ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಭಾನುವಾರ ಆರೋಪಿಸಿದ್ದಾರೆ.

ಈ ಕುರಿತು ಭಾನುವಾರ ಟ್ವೀಟ್ ಮಾಡಿರುವ ಚಿತ್ತಾಪುರ ಶಾಸಕರೂ ಆಗಿರುವ ಪ್ರಿಯಾಂಕ್ ಖರ್ಗೆ, 'ಹಿಂದೂ ವಿರೋಧಿ ಕಾಂಗ್ರೆಸ್' ಎಂದು ಬಿಜೆಪಿ ಧರ್ಮದ ಟೂಲ್ ಕಿಟ್ ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಕೇಂದ್ರ ಸರ್ಕಾರದ ಸಾಧನೆ ಒಂದೂ ಇಲ್ಲ. ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರದ ಸಾಧನೆ ಒಂದೂ ಇಲ್ಲ. ಭ್ರಷ್ಟಾಚಾರ, ಕಮಿಷನ್ ಹಾಗೂ ಹಗರಣಗಳಿಂದ ಬಿಜೆಪಿಯ ಪಾಪದ ಕೊಡ ತುಂಬಿ ತುಳುಕುತ್ತಿದೆ. ಹಾಗಾಗಿ ಬಿಜೆಪಿ ಧರ್ಮದ ಟೂಲ್ ಕಿಟ್ ಬಳಸುತ್ತಿದೆ. ಭಕ್ತಾದಿಗಳು ಇದನ್ನು ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಬಿಜೆಪಿಯ ಹಿಂದೂ ವಿರೋಧಿ ಕಾಂಗ್ರೆಸ್ ಟೂಲ್ ಕಿಟ್‌ಗೆ ಸಂಬಂಧಿಸಿದಂತೆ ಸ್ಕ್ರೀನ್‌ಶಾಟ್‌ಗಳನ್ನು ಪ್ರಿಯಾಂಕ್ ಖರ್ಗೆ ಹಂಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.