ADVERTISEMENT

ದ್ವಿತೀಯ ಪಿಯುಸಿ: ಇತಿಹಾಸ ಪರೀಕ್ಷೆಗೆ 18 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 17:58 IST
Last Updated 14 ಮಾರ್ಚ್ 2019, 17:58 IST
   

ಬೆಂಗಳೂರು: ದ್ವಿತೀಯ ಪಿಯುಸಿ ಇತಿಹಾಸ ಪರೀಕ್ಷೆಗೆ ರಾಜ್ಯಾದ್ಯಂತ 18 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಗೈರಾಗಿದ್ದರೆ, ಜೀವವಿಜ್ಞಾನ ಪ್ರಶ್ನೆಪತ್ರಿಕೆ ವಿದ್ಯಾರ್ಥಿಗಳಿಗೆ ತುಸು ಕಠಿಣವಾಗಿ ಪರಿಣಮಿಸಿತ್ತು.

ಗುರುವಾರ ನಡೆದ ಇತಿಹಾಸ, ಜೀವ ವಿಜ್ಞಾನ ಮತ್ತು ಬೇಸಿಕ್‌ ಮ್ಯಾಥ್‌ ಪರೀಕ್ಷೆಯಲ್ಲಿ ಒಟ್ಟು 22,619 ವಿದ್ಯಾರ್ಥಿಗಳು ಗೈರಾಗಿದ್ದರು. ಇತಿಹಾಸ ವಿಷಯದಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳು (18,342) ಗೈರಾಗಿದ್ದರು. ಜೀವ ವಿಜ್ಞಾನ 4,153 ಮತ್ತು ಬೇಸಿಕ್‌ ಮ್ಯಾಥ್‌ನಲ್ಲಿ 124 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಜೀವವಿಜ್ಞಾನ ವಿಷಯದಲ್ಲಿ ಪ್ರಶ್ನೆಗಳನ್ನು ಸುತ್ತು ಬಳಸಿ ಕೇಳಲಾಗಿತ್ತು, ಇನ್ನು ಕೆಲವು ಅನ್ವಯಿಕ ಸ್ವರೂಪದ್ದಾಗಿದ್ದರಿಂದ ಒಂದು ಅಂಕಗಳು ಮತ್ತು ಮೂರು ಅಂಕಗಳ ಪ್ರಶ್ನೆಗಳು ಕಠಿಣವಾಗಿದ್ದವು’ ಎಂದು ಕೆಲವು ವಿದ್ಯಾರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.