ADVERTISEMENT

ಜಾತಿವಾರು ಸಮೀಕ್ಷಕರಿಗೆ ಗೌರವಧನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 16:21 IST
Last Updated 10 ನವೆಂಬರ್ 2025, 16:21 IST
<div class="paragraphs"><p>ಹಣ </p></div>

ಹಣ

   

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಕಾರ್ಯನಿರ್ವಹಿಸಿದ ಸಮೀಕ್ಷಕರಿಗೆ ಗೌರವಧನ ನೀಡಲು ಒಟ್ಟು ₹ 127.73 ಕೋಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಒಬ್ಬರು ಮತ್ತು ಇಬ್ಬರು ಸದಸ್ಯರಿರುವ ಮನೆಗಳನ್ನು ಸಮೀಕ್ಷೆ ಮಾಡಿರುವುದಕ್ಕೆ ತಲಾ ₹ 50ರಂತೆ, ಮೂರು ಮತ್ತು ಮೂರಕ್ಕಿಂತ ಹೆಚ್ಚು ಸದಸ್ಯರಿರುವ ಮನೆಗಳನ್ನು ಸಮೀಕ್ಷೆ ಮಾಡಿರುವುದಕ್ಕೆ ತಲಾ ₹ 100ರಂತೆ ಸಮೀಕ್ಷೆದಾರರಿಗೆ ಪಾವತಿಸಲಾಗುವುದು.

ADVERTISEMENT

ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದಿಂದ (ಇಡಿಸಿಎಸ್) ಸಮೀಕ್ಷಕರ ಹೆಸರು ಮತ್ತು ಅವರಿಗೆ ಪಾವತಿಸಬೇಕಿರುವ ಮೊತ್ತದ ಮಾಹಿತಿ ಪಡೆದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪ್ರತ್ಯೇಕವಾಗಿಯೇ ಹಣ ಬಿಡುಗಡೆ ಮಾಡಲಾಗಿದೆ ಎಂದು ಆಯೋಗದ ಸದಸ್ಯ ಕಾರ್ಯದರ್ಶಿ ಕೆ.ಎ. ದಯಾನಂದ ತಿಳಿಸಿದ್ದಾರೆ.

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿನ ಸಮೀಕ್ಷಕರ ಗೌರವಧನವನ್ನು ಇನ್ನೂ ಬಿಡುಗಡೆ ಮಾಡಿಲ್ಲ.

‘ರಾಜ್ಯದಲ್ಲಿ ಒಟ್ಟು 1,46,48,053 ಕುಟುಂಬಗಳ ಸಮೀಕ್ಷೆ ನಡೆದಿದ್ದು, ಆ ಕುಟುಂಬಗಳ 5,52,90,296 ಜನರಿಂದ ದತ್ತಾಂಶ ಸಂಗ್ರಹಿಸಲಾಗಿದೆ. ಒಬ್ಬರು ಮತ್ತು ಇಬ್ಬರು ಸದಸ್ಯರಿರುವ 37,41,434 ಕುಟುಂಬಗಳ ಸಮೀಕ್ಷೆ ನಡೆದಿದ್ದು, ಈ ಮನೆಗಳ ಸಮೀಕ್ಷೆ ನಡೆಸಿದವರಿಗೆ ತಲಾ ₹ 50ರಂತೆ ₹ 18,70,71,700, ಮೂರು ಮತ್ತು ಅದಕ್ಕಿಂತ ಹೆಚ್ಚು ಸದಸ್ಯರಿರುವ 1,09,02,735 ಕುಟುಂಬಗಳ ಸಮೀಕ್ಷೆ ನಡೆಸಿದವರಿಗೆ ತಲಾ ₹ 100ರಂತೆ 109,02,73,500 ಪಾವತಿಸಬೇಕಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.