ADVERTISEMENT

23ರಂದು ಹುತ್ತರಿ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 20:15 IST
Last Updated 8 ನವೆಂಬರ್ 2018, 20:15 IST
ನಾಪೋಕ್ಲು ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬ ಆಚರಣೆಯ ದಿನ ಮತ್ತು ಮುಹೂರ್ತವನ್ನು ಗುರುವಾರ ನಿಶ್ಚಯಿಸಲಾಯಿತು
ನಾಪೋಕ್ಲು ಸಮೀಪದ ಕಕ್ಕಬ್ಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬ ಆಚರಣೆಯ ದಿನ ಮತ್ತು ಮುಹೂರ್ತವನ್ನು ಗುರುವಾರ ನಿಶ್ಚಯಿಸಲಾಯಿತು   

ನಾಪೋಕ್ಲು: ಕೊಡಗಿನ ಕುಲದೇವರೆಂದೇ ಪ್ರಸಿದ್ಧವಾಗಿರುವ ಕಕ್ಕಬ್ಬೆ ಗ್ರಾಮದ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಹಬ್ಬದ ದಿನ ಮತ್ತು ಮುಹೂರ್ತವನ್ನು ಗುರುವಾರ ನಿಶ್ಚಯಿಸಲಾಯಿತು.

ನ.23ರಂದು ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಉತ್ಸವ, ದೇವರು ಮಲ್ಮ ಬೆಟ್ಟಕ್ಕೆ ಸಾಗುವುದು, ಪೂಜಾ ಕೈಂಕರ್ಯ ನಡೆಯಲಿದ್ದು, ಅಂದು ರಾತ್ರಿ ಹುತ್ತರಿ ಹಬ್ಬ ನಡೆಯಲಿದೆ.

ದೇವಾಲಯದ ಪಾರಂಪರಿಕ ಜ್ಯೋತಿಷಿಯಾದ ಅಮ್ಮಂಗೇರಿ ಕಣಿಯರ ಕುಟುಂಬದ ಶಶಿಕುಮಾರ್ ಅವರು ಹುತ್ತರಿ ಹಬ್ಬದ ದಿನಾಂಕ ನಿಗದಿಪಡಿಸಿದರು.

ADVERTISEMENT

ಅಂದು ರೋಹಿಣಿ ನಕ್ಷತ್ರದಲ್ಲಿ ಭತ್ತದ ಗದ್ದೆಯಲ್ಲಿ ಕದಿರು ತೆಗೆಯುವ ಕಾರ್ಯಕ್ರಮವಿದ್ದು, ಇಗ್ಗುತ್ತಪ್ಪ ದೇವಾಲಯದಲ್ಲಿ ರಾತ್ರಿ 7.15ಕ್ಕೆ ನೆರೆ ಕಟ್ಟುವುದು, 8.15ಕ್ಕೆ ಕದಿರು ತೆಗೆಯುವುದು ಹಾಗೂ 9.15ಕ್ಕೆ ಭೋಜನಕ್ಕೆ ಪ್ರಾಶಸ್ತ್ಯ ಸಮಯ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.