ADVERTISEMENT

ಕೊಡವರು ಬೀಫ್‌ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ –ಸಿದ್ದರಾಮಯ್ಯ 

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 9:55 IST
Last Updated 19 ಡಿಸೆಂಬರ್ 2020, 9:55 IST
ಸಿದ್ದರಾಮಯ್ಯ 
ಸಿದ್ದರಾಮಯ್ಯ    

ಬೆಂಗಳೂರು: ಕೊಡವರು ಬೀಪ್ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ, ಆಹಾರಕ್ಕೆ ಜಾತಿ-ಧರ್ಮಗಳನ್ನು ಗಂಟುಹಾಕುವುದು ತಪ್ಪು ಎಂಬರ್ಥದಲ್ಲಿ ಬೀಫ್‌‌ ತಿನ್ನುವ ವಿಚಾರವನ್ನು ಹೇಳಿರುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೊಡವರು ಬೀಫ್‌‌ ತಿನ್ನುತ್ತಾರೆ ಎಂಬ ಹೇಳಿಕೆ ಸಂಬಂಧ ಕೊಡವ ಸಮುದಾಯದವರಿಂದ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ಅವರು ಟ್ವೀಟ್‌ ಮಾಡಿ, ಕೊಡವರು ಬೀಫ್‌ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದು ಕೊಡವ ಸಂಸ್ಕೃತಿ ಬಗ್ಗೆ ನನಗೆ ಅಪಾರವಾದ ಗೌರವ ಇದೆ ಎಂದು ಹೇಳಿದ್ದಾರೆ.

ಆಡು,ಕುರಿ,ಕೋಳಿ, ಹಂದಿ, ದನ ಹೀಗೆ ನಮ್ಮಲ್ಲಿ ಭಿನ್ನ ಆಹಾರ ಸಂಸ್ಕೃತಿ ಇದೆ.‌ ಆಹಾರಕ್ಕೆ ಜಾತಿ-ಧರ್ಮಗಳನ್ನು ಗಂಟುಹಾಕುವುದು ತಪ್ಪು ಎಂಬರ್ಥದಲ್ಲಿ ನಾನು ಹೇಳಿದ್ದೇನೆಯೇ ಹೊರತು‌ ಕೊಡವರು ಬೀಫ್‌ ತಿನ್ನುತ್ತಾರೆ ಎಂದು ನಾನು ಹೇಳಿಲ್ಲ. ಕೊಡವ ಸಂಸ್ಕೃತಿ ಬಗ್ಗೆ ನನಗೆ ಅಪಾರವಾದ ಗೌರವ ಇದೆ ಎಂದು ಅವರು ಶನಿವಾರ ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.