ADVERTISEMENT

‘ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಬದಲಿಸಲು ಕೇಳಿಲ್ಲ: ಸಚಿವ ದಿನೇಶ್ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:42 IST
Last Updated 1 ಜೂನ್ 2025, 15:42 IST
<div class="paragraphs"><p>ದಿನೇಶ್ ಗುಂಡೂರಾವ್</p></div>

ದಿನೇಶ್ ಗುಂಡೂರಾವ್

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಬದಲಿಸುವಂತೆ ನಾನು ಕೇಳಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ADVERTISEMENT

ಸುದ್ದಿಗಾರರ ಜೊತೆ ಭಾನುವಾರ ಮಾತನಾಡಿದ ಅವರು, ‘ಮಂಗಳೂರಿಗೆ ಭೇಟಿ ನೀಡಿ ಸಾಕಷ್ಟು ಕಾನೂನು ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಕಾನೂನು ಕ್ರಮ ಚುರುಕುಗೊಳಿಸುವಂತೆ ಗೃಹ ಸಚಿವರು ಸೂಚನೆ ನೀಡಿದ್ದಾರೆ. ಉಸ್ತುವಾರಿ ಬದಲಾವಣೆ ವಿಷಯ ಎಲ್ಲಿಂದ ಬಂತೊ ಗೊತ್ತಿಲ್ಲ’ ಎಂದರು.

‘ಜವಾಬ್ದಾರಿ ವಹಿಸಿಕೊಂಡ ಬಳಿಕ ಎಲ್ಲ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಉಸ್ತುವಾರಿ ಬದಲಾವಣೆಗೆ ಸಂಬಂಧಿಸಿದಂತೆ ಯಾರೊ ಒಬ್ಬರು, ಇಬ್ಬರು ಹೇಳಿಕೆ ಕೊಟ್ಟಿರಬಹುದು. ವಿನಾ ಕಾರಣ ರಾಜಕಾರಣ ಮಾಡಬಾರದು’ ಎಂದು ಹೇಳಿದರು.

‘ಶೇಕಡ 95ರಷ್ಟು ಜನರಿಗೆ ಗಲಭೆ ಬೇಕಾಗಿಲ್ಲ. ಕೆಲವೇ ಕೆಲವು ಜನ ಮತ್ತು ಸಂಘಟನೆಗಳು ಇದಕ್ಕೆ ಪ್ರಚೋದನೆ ನೀಡುತ್ತಿವೆ. ಹಿಂದೂ, ಮುಸ್ಲಿಂ ಎಂದು ನಾನು ಹೇಳುವುದಿಲ್ಲ. ಕೋಮುದ್ವೇಷ ನಿಗ್ರಹಕ್ಕೆ ರಚಿಸಿರುವ ವಿಶೇಷ ಪಡೆ ಸದ್ಯದಲ್ಲೇ ಕೆಲಸ ಆರಂಭಿಸಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.