ADVERTISEMENT

ಐಎಎಸ್‌ ಅಧಿಕಾರಿಗಳಿಗೆ ಬಡ್ತಿ–ವರ್ಗಾವಣೆ: ರಾಜ್ಯ ಸರ್ಕಾರ ಆದೇಶ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 23:30 IST
Last Updated 31 ಡಿಸೆಂಬರ್ 2025, 23:30 IST
<div class="paragraphs"><p>ವರ್ಗಾವಣೆ</p></div>

ವರ್ಗಾವಣೆ

   

ಬೆಂಗಳೂರು: ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ರಿತೇಶ್‌ ಕುಮಾರ್‌ ಸಿಂಗ್ (ಆರ್ಥಿಕ ಇಲಾಖೆ), ವಿ. ರಶ್ಮಿ ಮಹೇಶ್ (ಶಾಲಾ ಶಿಕ್ಷಣ ಮತ್ತು ಸಾಕ್ಷರತೆ), ಮೊಹ್ಮದ್‌ ಮೊಹಿಸಿನ್‌ (ವೈದ್ಯಕೀಯ ಶಿಕ್ಷಣ), ರಾಜೇಂದ್ರ ಕುಮಾರ್ ಕಟಾರಿಯಾ (ಕಂದಾಯ) ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿ ಆಯಾ ಇಲಾಖೆಯಲ್ಲಿಯೇ ಮುಂದುವರಿಸಿ ಬುಧವಾರ ಆದೇಶ ಹೊರಡಿಸಲಾಗಿದೆ.

ಹಲವು ಐಎಎಸ್‌ ಅಧಿಕಾರಿಗಳಿಗೆ ಉನ್ನತ ಆಡಳಿತ ದರ್ಜೆ (ಎಚ್‌ಎಜಿ), ಸೂಪರ್‌ ಟೈಮ್‌ ಸ್ಕೇಲ್‌, ಆಯ್ಕೆ ದರ್ಜೆ, ಕಿರಿಯ ಆಡಳಿತ ದರ್ಜೆ, ಸೀನಿಯರ್‌ ಟೈಮ್‌ ಸ್ಕೇಲ್ ಹೀಗೆ ಬಡ್ತಿ ನೀಡಿ ಸದ್ಯ ಇರುವ ಇಲಾಖೆಯಲ್ಲಿಯೇ ಮುಂದುವರಿಸಲಾಗಿದೆ. ಕೆಲವರನ್ನು ವರ್ಗಾವಣೆ ಮಾಡಲಾಗಿದೆ.

ADVERTISEMENT

ವರ್ಗಾವಣೆಗೊಂಡವರು:

ಎಂ. ಕನಗವಲ್ಲಿ– ಕಾರ್ಯದರ್ಶಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ. ಕೆ.ಬಿ. ಶಿವಕುಮಾರ್– ವ್ಯವಸ್ಥಾಪಕ ನಿರ್ದೇಶಕ, ಬಿಎಂಟಿಸಿ. ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ– ಸಿಇಒ, ಇನ್ವೆಸ್ಟ್‌ ಕರ್ನಾಟಕ. ವಿನೋತ್‌ ಪ್ರಿಯಾ– ಕಾರ್ಯದರ್ಶಿ, ಪಶು ಸಂಗೋಪಾನಾ ಇಲಾಖೆ. ಜೆ. ಮಂಜುನಾಥ್– ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಆರ್‌. ಗಿರೀಶ್– ಕಾರ್ಯದರ್ಶಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ. ವೆಂಕಟ್ ರಾಜ– ಆಯುಕ್ತ, ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ. ಪ್ರಭುಲಿಂಗ ಕವಳಿಕಟ್ಟಿ– ಜಿಲ್ಲಾಧಿಕಾರಿ, ಶಿವಮೊಗ್ಗ. ಎಸ್‌.ಜೆ ಸೋಮಶೇಖರ್‌– ಜಿಲ್ಲಾಧಿಕಾರಿ, ಕೊಡಗು. ಅರುಂಧತಿ ಚಂದ್ರಶೇಖರ್‌– ಆಯುಕ್ತೆ, ಗ್ರಾಮೀಣ ಅಭಿವೃದ್ಧಿ ಇಲಾಖೆ (ಹೆಚ್ಚುವರಿ ಹೊಣೆ), ಪಿ.ಎನ್‌. ರವೀಂದ್ರ– ನಿರ್ದೇಶಕ, ಪೌರಾಡಳಿತ ಇಲಾಖೆ, ಮೀನಾ ನಾಗರಾಜ್– ಆಯುಕ್ತೆ, ಕಂದಾಯ ಇಲಾಖೆ ( ಸಾಮಾಜಿಕ ಭದ್ರತೆ), ಎಂ.ಆರ್‌. ರವಿಕುಮಾರ್, ಆಯುಕ್ತ, ಆಹಾರ ಇಲಾಖೆ, ವೈ.ಎಸ್‌. ಪಾಟೀಲ – ನಿರ್ದೇಶಕ, ತೋಟಗಾರಿಕೆ (ಹೆಚ್ಚುವರಿ ಹೊಣೆ), ಆರ್‌. ಸ್ನೇಹಲ್‌– ವ್ಯವಸ್ಥಾಪಕ ನಿರ್ದೇಶಕಿ, ಕೌಶಲ ಅಭಿವೃದ್ಧಿ ನಿಗಮ (ಹೆಚ್ಚುವರಿ ಹೊಣೆ). ಶುಭ ಕಲ್ಯಾಣ್– ಸಿಇಒ, ಜಿಲ್ಲಾ ಪಂಚಾಯಿತಿ (ತುಮಕೂರು) (ಹೆಚ್ಚುವರಿ ಹೊಣೆ). 

ಶಿಲ್ಪಾ ನಾಗ್– ಆಯುಕ್ತೆ, ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ (ಹೆಚ್ಚುವರಿ ಹೊಣೆ). ಗುರುದತ್‌ ಹೆಗ್ಡೆ– ಆಯುಕ್ತ, ಆರೋಗ್ಯ ಇಲಾಖೆ ಮತ್ತು ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಎಂಎಸ್‌ಸಿಎಲ್‌ (ಹೆಚ್ಚುವರಿ ಹೊಣೆ). ಜಿ. ಪ್ರಭು– ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ, ಎನ್‌.ಎಂ. ನಾಗರಾಜ– ಜಿಲ್ಲಾಧಿಕಾರಿ, ಚಿಕ್ಕಮಗಳೂರು. ಶ್ರೀರೂಪ,– ಜಿಲ್ಲಾಧಿಕಾರಿ, ಚಾಮರಾಜನಗರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.