ADVERTISEMENT

ಸಂವಿಧಾನ ತಿದ್ದುಪಡಿ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಇರಲಿ: ದೊಡ್ಡರಂಗೇಗೌಡ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 18:29 IST
Last Updated 22 ಫೆಬ್ರುವರಿ 2021, 18:29 IST
ದೊಡ್ಡರಂಗೇಗೌಡ
ದೊಡ್ಡರಂಗೇಗೌಡ   

ಹಾಸನ: ಸಂವಿಧಾನ ತಿದ್ದುಪಡಿ ವಿಚಾರವಾಗಿ ಹಾಸನದಲ್ಲಿ ತಾವು ನೀಡಿದ ಹೇಳಿಕೆಗೆ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಪ್ರೊ.ದೊಡ್ಡರಂಗೇಗೌಡ ಸೋಮವಾರ ಸ್ಪಷ್ಟೀಕರಣ ನೀಡಿದ್ದಾರೆ.

ತಮ್ಮ ಹೇಳಿಕೆಯು ದಲಿತರ ವಿರುದ್ಧವಾದದ್ದಲ್ಲ; ಉಳ್ಳವರ ವಿರುದ್ಧವಾದದ್ದು. ಬಡವರ ಪರವಾದದ್ದು. ಇದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ.

‘ನಮ್ಮದು ಬಹುಮುಖೀ ರಾಷ್ಟ್ರವಾದರೂ ಏಕರೂಪದ ಶಿಕ್ಷಣ ಇಲ್ಲಿಲ್ಲ. ಈಗ ದೇಶದಲ್ಲಿ ಏಕರೂಪ ಶಿಕ್ಷಣ ಅನಿವಾರ್ಯ ಅನ್ನಿಸುತ್ತಿದೆ. ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಬಲ್ಲಿದರು ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ. ಎಲ್ಲರಿಗೂ ಒಂದೇ ರೀತಿ ಶಿಕ್ಷಣ ದೊರೆಯುವಂತಾಗಬೇಕು. ಆಗ ಮಾತ್ರ ಸಮಾನತೆ ಸಾಧ್ಯ. ಅನುಭವ ಮಂಟಪದ ಮಾದರಿಯಲ್ಲಿ ಎಲ್ಲರಿಗೂ (ಹಿಂದುಳಿದವರಿಗೆ) ಹೆಚ್ಚಿನ ಅವಕಾಶ ಸಿಗುವಂತಾಗಬೇಕು. ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗದಂತೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಏಕರೂಪ ಶಿಕ್ಷಣ ಜಾರಿಗೆ ತರುವ ನಿಟ್ಟಿನಲ್ಲಿ ದೇಶದ ಸಂವಿಧಾನದಲ್ಲಿ ಮಾರ್ಪಾಟು ಮಾಡುವುದು ಸೂಕ್ತವಾದೀತು’ ಎಂದಿದ್ದಾಗಿ ಅವರು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.