ADVERTISEMENT

ಅಕ್ರಮ ಗಣಿಗಾರಿಕೆ ಪ್ರಕರಣ: ಶಾಸಕ ಬಿ‌.ನಾಗೇಂದ್ರ ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 10:06 IST
Last Updated 18 ಮಾರ್ಚ್ 2019, 10:06 IST
ಬಿ. ನಾಗೇಂದ್ರ
ಬಿ. ನಾಗೇಂದ್ರ   

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಅವರನ್ನು ಜನಪ್ರತಿನಿಧಿಗಳ ಕೋರ್ಟ್ ಪೊಲೀಸರ ವಶಕ್ಕೆ ನೀಡಿದೆ.

ತಮ್ಮ ವಿರುದ್ಧ ಈ ಮೊದಲು ಹೊರಡಿಸಲಾಗಿದ್ದ ಜಾಮೀನುರಹಿತ ವಾರಂಟ್ ರಿಕಾಲ್ ಮಾಡಿಸಿಕೊಳ್ಳಲು ನಾಗೇಂದ್ರ ಅವರು ಇಲ್ಲಿನ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯಕ್ಕೆ ಸೋಮವಾರ ಹಾಜರಾದರು.

ಮಧ್ಯಾಹ್ನ 1.30ರ ವೇಳೆಯಲ್ಲಿ ಕೋರ್ಟ್‌ಗೆ ಹಾಜರಾದ ಕೂಡಲೇ ಅವರನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳುವಂತೆ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಆದೇಶಿಸಿದರು.

ADVERTISEMENT

ಈ ಪ್ರಕರಣದಲ್ಲಿ ಚೆನ್ನೈನ ಸಿಬಿಐ ಅಧಿಕಾರಿಗಳು ಈಗಾಗಲೇ ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಮರೆಯಾಗಿದ್ದ ಶಾಸಕರು!
ಮಧ್ಯಾಹ್ನ 2 ಗಂಟೆಗೆ ಊಟದ ವಿರಾಮದ ವೇಳೆಯಲ್ಲಿ ಶಾಸಕ ನಾಗೇಂದ್ರ ಅವರು ಕೆಲಹೊತ್ತು ಪೊಲೀಸ್ ವಶದಿಂದ ಕಣ್ಮರೆಯಾಗಿದ್ದರು. ಇದರಿಂದ ಕಂಗಾಲದ ಪೊಲೀಸ್ ಬಿ‌. ಅರ್.ಫಾಲಾಕ್ಷ ಈ ಸಂಗತಿಯನ್ನು ಬೆಂಚ್ ಕ್ಲರ್ಕ್ ಗಮನಕ್ಕೆ ತಂದರು‌.

ನಾಗೇಂದ್ರ ಅನುಯಾಯಿಗಳು, "ಎಲ್ಲೂ ಹೋಗಿಲ್ಲ ಬಿಡ್ರೀ. ಊಟಕ್ಕೆ ಹೋಗಿದ್ದರು" ಎಂದು ಫಾಲಾಕ್ಷ ಅವರಿಗೇ ತಿರುಗಿ ಉತ್ತರಿಸಿದರು.
ಅಷ್ಟು ಹೊತ್ತಿಗೆ ನಾಗೇಂದ್ರ ಮತ್ತು ಮಾಜಿ ಸಚಿವ ಜನಾರ್ದನ ರೆಡ್ಡಿ ಕೋರ್ಟ್ ಒಳಗೆ ಬಂದು ಕುಳಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.