ADVERTISEMENT

India Pak Tensions: 13 ನಗರಗಳಲ್ಲಿ ಕಾಮೆಡ್‌–ಕೆ ಪರೀಕ್ಷೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 15:22 IST
Last Updated 9 ಮೇ 2025, 15:22 IST
<div class="paragraphs"><p>ಪರೀಕ್ಷೆ–ಪ್ರಾತಿನಿಧಿಕ ಚಿತ್ರ</p></div>

ಪರೀಕ್ಷೆ–ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿವಿಧ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕದ ವೈದ್ಯಕೀಯ ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ (ಕಾಮೆಡ್‌–ಕೆ) ಮೇ 10ರಂದು ನಿಗದಿಪಡಿಸಿದ್ದ ಪ್ರವೇಶ ಪರೀಕ್ಷೆಯನ್ನು ಉತ್ತರ ಭಾರತದ 13 ನಗರಗಳಲ್ಲಿ ಮುಂದೂಡಿದೆ.

‘ಆಪರೇಷನ್ ಸಿಂಧೂರ್‌’ನಿಂದ ಉಂಟಾಗಿರುವ ತುರ್ತು ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಗಡಿ ರಾಜ್ಯಗಳ ನಗರಗಳಲ್ಲಿ ಮಾತ್ರ ಪರೀಕ್ಷೆ ಮುಂದೂಡಲಾಗಿದೆ. ಬೆಂಗಳೂರು ಸೇರಿದಂತೆ ಉಳಿದ ನಗರಗಳಲ್ಲಿ ಮೇ 10ರಂದೇ ಪರೀಕ್ಷೆ ನಡೆಯಲಿದೆ’ ಎಂದು ಕಾಮೆಡ್‌–ಕೆ ಹೇಳಿದೆ.

ADVERTISEMENT

ಗುಜರಾತ್‌ನ ಜಾಮ್‌ನಗರ, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ, ಜಮ್ಮು, ಪಂಜಾಬ್‌ನ ಲೂಧಿಯಾನ, ಬಠಿಂಡಾ ಜಲಂಧರ್‌, ಮೊಹಾಲಿ, ಪಟಿಯಾಲ, ಅಮೃತಸರ, ರಾಜಸ್ಥಾನದ ಜೋಧಪುರ, ಬಿಕನೇರ್‌, ಶ್ರೀಗಂಗಾನಗರ, ಹರಿಯಾಣದ ಅಂಬಾಲ ನಗರಗಳಲ್ಲಿ ಮೇ 10ರಂದು ಪರೀಕ್ಷೆ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.