ADVERTISEMENT

ಎಸ್‌.ಎಲ್ ಭೈರಪ್ಪ ಅವರಿಗೆ ಕುರುಡಾ, ಕಿವುಡಾ?: ದೇವನೂರ ಮಹಾದೇವ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 18:34 IST
Last Updated 5 ಜನವರಿ 2021, 18:34 IST
ದೇವನೂರ ಮಹಾದೇವ
ದೇವನೂರ ಮಹಾದೇವ   

ಮೈಸೂರು: ಕೃಷಿ ಕಾಯ್ದೆ ವಿರೋಧಿಸಿ ಪಂಜಾಬಿಗಳು ಮಾತ್ರ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ, ಸಾಹಿತಿ ಎಸ್.ಎಲ್.ಭೈರಪ್ಪ ಅವರ ಹೇಳಿಕೆಗೆ ದೇವನೂರ ಮಹಾದೇವ ಮಂಗಳವಾರ ಇಲ್ಲಿ ತಿರುಗೇಟು ನೀಡಿದರು.

ರಾಜ್ಯದಲ್ಲೂ ರೈತರು ಪ್ರತಿ ಭಟನೆ ನಡೆಸುತ್ತಿರುವುದು ಅವರಿಗೆ ಕಾಣಿಸುತ್ತಿಲ್ಲವೇ ಎಂದು ಕಿಡಿಕಾರಿದ ಅವರು, ‘ಭೈರಪ್ಪನವರ ಕಣ್ಣು ಕುರುಡಾಗಿದೆಯೇ, ಕಿವಿ ಕಿವುಡಾಗಿದೆಯೇ, ಸಂವೇದನೆ ಹೊರಟು ಹೋಗಿದೆಯೇ ಎಂದು ಪತ್ರಕರ್ತರು ಅವರನ್ನೇ ಕೇಳಬೇಕು’ ಎಂದರು.

‘ಸ್ವರಾಜ್ ಇಂಡಿಯಾ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಜ್ಯದೆಲ್ಲೆಡೆ ಆಯ್ಕೆಯಾಗಿದ್ದಾರೆ. ಇದು ನಮಗೂ ಅನಿರೀಕ್ಷಿತ. ಆದರೆ, ‘ಆಪರೇಷನ್ ಕಮಲ’ದ ಮೂಲಕ ಅನೈತಿಕ ರಾಜಕಾರಣ ಬಿತ್ತಿದ ಬಿಜೆಪಿ, ಈಗ ಗೆದ್ದವರೆಲ್ಲ ತಮ್ಮವರೇ ಎಂದು ಹೇಳುತ್ತಿದೆ. ಇದು ಅನೈತಿಕತೆಯ ಪರಮಾವಧಿ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.