ADVERTISEMENT

ಐಸೆರ್‌ ಬಿಎಸ್‌–ಎಂಎಸ್‌ ಪ್ರವೇಶಕ್ಕೆ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 18:28 IST
Last Updated 3 ಏಪ್ರಿಲ್ 2019, 18:28 IST

ಬೆಂಗಳೂರು: ಶುದ್ಧ ವಿಜ್ಞಾನದ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಐಸೆರ್‌ (ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೇಷನ್‌ ಅಂಡ್‌ ರೀಸರ್ಚ್‌) ದ್ವಿತೀಯ ಪಿಯುಸಿ ಬಳಿಕ ಬಿಎಸ್‌– ಎಂಎಸ್ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.

ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ನಡೆಯುವ ಐಸೆರ್‌ಗಳು ಸ್ವಾಯುತ್ತ ಸಂಸ್ಥೆಯಾಗಿವೆ. ಬೆಹ್ರಂಪುರ, ಭೋಪಾಲ್‌, ಕೋಲ್ಕತ್ತ, ಮೊಹಾಲಿ, ಪುಣೆ, ತಿರುವನಂತಪುರ ಮತ್ತು ತಿರುಪತಿಯಲ್ಲಿ ಐಸೆರ್‌ಗಳಿವೆ.

ಏಳು ಐಸೆರ್‌ಗಳಲ್ಲಿ ಒಟ್ಟು 1,512 ಸೀಟುಗಳು ಇವೆ. ಇದರ ಪ್ರವೇಶಕ್ಕೆ ಕೆವಿಪಿವೈ, ಐಐಟಿ– ಜೆಇಇ ಮೈನ್‌ ತೇರ್ಗಡೆ ಹೊಂದಿದವರಿಗೆ ಅವಕಾಶವಿದೆ. ಅಲ್ಲದೆ, ಸ್ಟೇಟ್‌ ಅಥವಾ ಸೆಂಟ್ರಲ್‌ ಬೋರ್ಡ್‌ ವಿದ್ಯಾರ್ಥಿಗಳಿಗೆ ನಡೆಸುವ ಆಪ್ಟಿಟ್ಯೂಟ್‌ ಪರೀಕ್ಷೆಯ ಮೂಲಕ ಪ್ರವೇಶಾವಕಾಶವಿದೆ. ಈ ಪರೀಕ್ಷೆ ದೇಶ ವ್ಯಾಪಿ ಪ್ರಮುಖ ನಗರಗಳಲ್ಲಿ ನಡೆಯಲಿದೆ.

ADVERTISEMENT

ಬಿಎಸ್‌– ಎಂಎಸ್‌ ಐದು ವರ್ಷಗಳ ಕೋರ್ಸ್‌ ಆಗಿದ್ದು, ಜೀವವಿಜ್ಞಾನ, ಭೌತವಿಜ್ಞಾನ, ಗಣಿತ, ರಸಾಯನಶಾಸ್ತ್ರಗಳ ಅಧ್ಯಯನ ಮತ್ತು ಸಂಶೋಧನೆಗೆ ಅವಕಾಶವಿದೆ. ವಿವರಗಳಿಗೆ https://www.iiseradmission.in ನೋಡಬಹುದು.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಏ.28 ಕೊನೆಯ ದಿನ. ಜೂನ್‌ 2ರಂದು ಆಪ್ಟಿಟ್ಯೂಡ್‌ ಟೆಸ್ಟ್‌ ನಡೆಯಲಿದೆ.

ಐಐಎಸ್‌ಸಿಗೂ ಪ್ರವೇಶ

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ನಡೆಸುವ ನಾಲ್ಕು ವರ್ಷಗಳ ಬಿಎಸ್‌ ಸಂಶೋಧನಾ ಪದವಿ ಕೋರ್ಸ್‌ಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ದೇಶದ ಅತ್ಯುನ್ನತ ವಿಜ್ಞಾನ ಸಂಶೋಧನಾ ಸಂಸ್ಥೆಯಾಗಿರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪದವಿ ಕೋರ್ಸ್‌ಗಳಿಗೆ ಪಿಯುಸಿ ಬಳಿಕ ಸೇರಬಹುದಾಗಿದ್ದು, ಕೆವಿಪಿವೈ, ಐಐಟಿ–ಜೆಇಇ ಮೈನ್‌ ಅಥವಾ ನೀಟ್‌–ಯುಜಿ ಮೂಲಕ ಪ್ರವೇಶಕ್ಕೆ ಅವಕಾಶವಿದೆ. ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಪ್ರಧಾನ ವಿಷಯವಾಗಿ ಓದಿರಬೇಕು. ಜೀವ ವಿಜ್ಞಾನ, ಸಂಖ್ಯಾಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ವಿಜ್ಞಾನ ಓದಿರಬೇಕು. ದ್ವಿತೀಯ ಪಿಯುಸಿಯಲ್ಲಿ ಶೇ 60ರಷ್ಟು ಅಂಕ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸಲು ಕೊನೆಯ ದಿನ ಏಪ್ರಿಲ್ 30. ಹೆಚ್ಚಿನ ವಿವರಗಳಿಗೆhttps://www.iisc.ac.in/ug

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.