ADVERTISEMENT

ಮಾಸ್ಕ್ ವಿಲೇವಾರಿ ಬಗ್ಗೆ ಮಾರ್ಗಸೂಚಿ ಹೊರಡಿಸಿ: ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 5:46 IST
Last Updated 21 ಅಕ್ಟೋಬರ್ 2020, 5:46 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಮನೆಗಳಲ್ಲಿ ಬಳಕೆ ಮಾಡಿದ ಮಾಸ್ಕ್‌ ವಿಲೇವಾರಿ ಸಂಬಂಧ ಕೂಡಲೇ ಮಾರ್ಗಸೂಚಿ ಹೊರಡಿಸುವಂತೆ ರಾಜ್ಯ ಸರ್ಕಾಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‍ಪಿಪಿಇ ಕಿಟ್ ಮತ್ತು ಬಳಕೆಯಾದ ಮಾಸ್ಕ್ ವಿಲೇವಾರಿ ವಿಷಯ ಅತ್ಯಂತ ಮಹತ್ವದ್ದು ಎಂದು ಅಭಿಪ್ರಾಯಪಟ್ಟಿತು.

‘ಬೆಂಗಳೂರಿನಲ್ಲಿ 1.30 ಕೋಟಿ ಜನಸಂಖ್ಯೆ ಇದೆ. ಒಬ್ಬರು ಒಂದು ಮಾಸ್ಕ್ ಬಳಕೆ ಮಾಡಿದರೂ 1.30 ಕೋಟಿ ಮಾಸ್ಕ್ ಬಳಕೆಯಾಗುತ್ತಿದೆ. ಅದರ ವಿಲೇವಾರಿ ಮಾಡುವ ಬಗ್ಗೆ ಕೂಡಲೇ ಮಾರ್ಗಸೂಚಿ ಹೊರಡಿಸಬೇಕು ಮತ್ತು ಅದನ್ನು ಪ್ರಚಾರ ಮಾಡಬೇಕು. ವಿಲೇವಾರಿ ಬಗ್ಗೆ ಪೌರ ಕಾರ್ಮಿಕರಿಗೂ ತರಬೇತಿ ನೀಡಬೇಕು’ ಎಂದು ‍ಪೀಠ ತಿಳಿಸಿತು.

ADVERTISEMENT

ಕೋವಿಡ್ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್ ಪೂರೈಸಲು ವಿಧಿಸುತ್ತಿರುವ ದರ ಮತ್ತು ಎನ್‌–95 ಮಾಸ್ಕ್ ದರ ನಿಗದಿ ಬಗ್ಗೆಯೂ ಮಾರ್ಗಸೂಚಿ ಹೊರಡಿಸುವಂತೆ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.