ADVERTISEMENT

ಬೆಳಗಾವಿಗೆ ವಂದೇ ಭಾರತ್‌: ಪ್ರಧಾನಿ ಮೋದಿಗೆ ಶೆಟ್ಟರ್‌ ಮನವಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 14:20 IST
Last Updated 11 ಜನವರಿ 2025, 14:20 IST
<div class="paragraphs"><p>ನರೇಂದ್ರ ಮೋದಿ ಅವರಿಗೆ ಜಗದೀಶ ಶೆಟ್ಟರ್‌ ಹೂಗುಚ್ಛ ನೀಡಿದರು.&nbsp; </p></div>

ನರೇಂದ್ರ ಮೋದಿ ಅವರಿಗೆ ಜಗದೀಶ ಶೆಟ್ಟರ್‌ ಹೂಗುಚ್ಛ ನೀಡಿದರು. 

   

ನವದೆಹಲಿ: ಬೆಂಗಳೂರು - ಧಾರವಾಡದ ನಡುವೆ ಸಂಚರಿಸುತ್ತಿರುವ ‘ವಂದೇ ಭಾರತ್‌’ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಬೆಳಗಾವಿಯವರೆಗೆ ವಿಸ್ತರಿಸಬೇಕು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು. 

ಪ್ರಧಾನಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಶೆಟ್ಟರ್‌, ರಾಮದುರ್ಗದಲ್ಲಿರುವ ಐತಿಹಾಸಿಕ ಶಬರಿ ಕೊಳ್ಳವನ್ನು ಅಭಿವೃದ್ಧಿಪಡಿಸುವಂತೆ ವಿನಂತಿಸಿದರು.

ADVERTISEMENT

‘ಉಡಾನ್ 3.0’ ಯೋಜನೆಯ ಅವಧಿಯನ್ನು ಇನ್ನೂ ಹೆಚ್ಚಿಸಿದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಮತ್ತು ಬೆಳಗಾವಿ ನಗರದ ವಿಮಾನಯಾನ ಸೇವೆಯ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.