ADVERTISEMENT

ಕೈಗಾರಿಕೆ ಉಳಿದರೆ ಕಾರ್ಮಿಕರು: ಜಗದೀಶ್ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 13:20 IST
Last Updated 1 ಜುಲೈ 2020, 13:20 IST
ಸಚಿವ ಜಗದೀಶ್ ಶೆಟ್ಟರ್
ಸಚಿವ ಜಗದೀಶ್ ಶೆಟ್ಟರ್   

ಶಿವಮೊಗ್ಗ: ಕೈಗಾರಿಕೆಗಳು ಉಳಿದರೆ ಕಾರ್ಮಿಕರೂ ಉಳಿಯುತ್ತಾರೆ. ಹಾಗಾಗಿ, ಸರ್ಕಾರ ಉದ್ಯಮಿಗಳು ಹಾಗೂ ಕಾರ್ಮಿಕರ ಸಮಾನ ಹಿತಾಸಕ್ತಿಗೆ ಪೂರಕವಾಗಿನಿಯಮಗಳನ್ನು ರೂಪಿಸಿದೆಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ದೇವಾತಿಕೊಪ್ಪ ಕೈಗಾರಿಕಾ ಪ್ರದೇಶದಲ್ಲಿಕೈಗಾರಿಕೋದ್ಯಮಿಗಳಜತೆ ಮಾತುಕತೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಕೊರೊನಾದ ಸಂಕಷ್ಟದಸಮಯದಲ್ಲಿಕೈಗಾರಿಕೆಗಳಿಗೆ ಹೆಚ್ಚಿನ ನೆರವು ಒದಗಿಸಲು ಸರ್ಕಾರ ಹಲವುಕ್ರಮ ಕೈಗೊಂಡಿದೆ.ಕೈಗಾರಿಕೆಗಳಿಗೆ ಪೂರಕವಾಗಿಈಚೆಗೆಕೆಲವು ತಿದ್ದುಪಡಿ ಮಾಡಲಾಗಿದೆ. ಉದ್ದಿಮೆ ಸ್ಥಾಪಿಸಲು ಮುಂದೆ ಬರುವವರು ಅನುಮತಿ ಪತ್ರ ಪಡೆದರೆ ಸಾಕು. ಮೂರು ವರ್ಷಗಳವರೆಗೆ ಪರವಾನಗಿ ಪಡೆಯುವ ಅಗತ್ಯವಿಲ್ಲ. ಕಟ್ಟಡ ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯ ಕಲ್ಪಿಸಿಕೊಳ್ಳಬಹುದು. ಸಾಲ ಸೌಲಭ್ಯ ಸೇರಿದಂತೆ ನೆರವು ಪಡೆಯಬಹುದು ಎಂದರು.

ADVERTISEMENT

ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದರೂ ಲಾಕ್‌ಡೌನ್‌ ಮಾಡದಿರಲು ನಿರ್ಧರಿಸಲಾಗಿದೆ. ಜೀವ ಹಾಗೂ ಜೀವನ ಎರಡೂ ಮುಖ್ಯ. ಎಲ್ಲ ಜನರ ನಿತ್ಯದ ಬದುಕೂ ಸಾಗಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.