ADVERTISEMENT

ಆ್ಯಂಬಿಡೆಂಟ್‌ ವಂಚನೆ: ಜನಾರ್ದನ ರೆಡ್ಡಿ ವಿಚಾರಣೆ

ಇ.ಡಿ ಅಧಿಕಾರಿಗಳ ಮುಂದೆ ಹಾಜರಾದ ಬಿಜೆಪಿ ಮುಖಂಡ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 20:00 IST
Last Updated 3 ಜುಲೈ 2019, 20:00 IST
   

ಬೆಂಗಳೂರು: ಆ್ಯಂಬಿಡೆಂಟ್‌ ವಂಚನೆ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯವು (ಇ.ಡಿ) ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬುಧವಾರ ಸುಮಾರು ಐದು ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿತು.

ಎರಡು ಸಂದರ್ಭಗಳಲ್ಲಿ ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ ಜನಾರ್ದನ ರೆಡ್ಡಿ ಬುಧವಾರ ಮಧ್ಯಾಹ್ನ ಇ.ಡಿ ಕಚೇರಿಗೆ ಬಂದರು. ಸಂಜೆ ವಿಚಾರಣೆ ಮುಗಿಸಿ ಹಿಂತಿರುಗಿದರು ಎಂದು ಉನ್ನತ ಮೂಲಗಳು ತಿಳಿಸಿವೆ.

‘ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ‍’, ಅಕ್ರಮ ಹಣ ವರ್ಗಾವಣೆ ಕಾಯ್ದೆ, ವಿದೇಶಿ ವಿನಿಮಯ ಕಾಯ್ದೆಗಳನ್ನು ಉಲ್ಲಂಘಿಸಿ ₹ 600 ಕೋಟಿ ಸರಣಿ ವಂಚನೆ ಮಾಡಿರುವ ಆ್ಯಂಬಿಡೆಂಟ್‌ ವಿರುದ್ಧ ನಡೆಯುತ್ತಿರುವ ಇ.ಡಿ ತನಿಖೆಯಿಂದ ಸಯ್ಯದ್‌ ಅಹಮದ್‌ ಫರೀದ್‌ ಅವರನ್ನು ರಕ್ಷಣೆ ಮಾಡಲು ₹ 20 ಕೋಟಿ ‘ವ್ಯವಹಾರ’ ಕುದುರಿಸಿದ ಆರೋಪಕ್ಕೆ ರೆಡ್ಡಿ ಒಳಗಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.